ಬೆಳಗಾವಿ : ಪಟಾಕಿ ಸಿಡಿದು ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಪ್ರಕರಣಯೊಂದು ಬೆಳಗಾವಿ ತಾಲೂಕಿನ ಮುಚಂಡಿ ಗ್ರಾಮದಲ್ಲಿ ನಡೆದಿದೆ. ಸಾರ್ವಜನಿಕ ಗಣೇಶ ಮೂರ್ತಿ ವಿಸರ್ಜನೆ ಈ ಅವಘಡ ಸಂಭವಿಸಿದೆ. ಮುಚಂಡಿ ಗ್ರಾಮದ ಪರುಶುರಾಮ್ ಬಸರಿಕಟ್ಟಿ(10) ವರ್ಷದ ಬಾಲಕನಿಗೆ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಗೊಂಡವರಿಗೆ ಬೆಳಗಾವಿ ನಗರದ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಂತೋಷ ವಟಾರ್(34) ಎಂಬುವರಿಗೆ ಮುಖ, ತೊಡೆ ಕಣ್ಣು ಹಾಗೂ ಬಾಲಕನ ಮಾರ್ಮಾಂಗಕ್ಕೆ ಸುಟ್ಟ ಗಂಭೀರ ಗಾಯಗಲಾಗಿದೆ. ಈ ಘಟನೆ ಬೆಳಗಾವಿಯ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.