ಕರ್ನಾಟಕ

ಮೊದಲು ಬಿಎಸ್‌ವೈಗೆ ತೇಜೋವಧೆ ಮಾಡುವುದನ್ನು ನಿಲ್ಲಿಸಿ; ವಿಜಯೇಂದ್ರ

ಒಂದು ವರ್ಷದಿಂದ ಬಿ.ಎಸ್. ಯಡಿಯೂರಪ್ಪನವರ ತೇಜೋವಧೆ, ಅವಮಾನ ಮಾಡಲಾಗುತ್ತಿದೆ. ಮೊದಲು ಅದನ್ನು ತಡೆಯುವ ಕೆಲಸ ಹಿರಿಯರು ಮಾಡಲಿ ಎಂದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ಒಂದು ವರ್ಷದಿಂದ ಬಿ.ಎಸ್. ಯಡಿಯೂರಪ್ಪನವರ ತೇಜೋವಧೆ, ಅವಮಾನ ಮಾಡಲಾಗುತ್ತಿದೆ. ಮೊದಲು ಅದನ್ನು ತಡೆಯುವ ಕೆಲಸ ಹಿರಿಯರು ಮಾಡಲಿ ಎಂದು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರದಲ್ಲಿ ಮಾತನಾಡಿದ ಅವರು, ಇದಕ್ಕೆಲ್ಲಾ ಹೈಕಮಾಂಡ್ ಬೆಂಬಲ ಹಾಗೂ ಸಂತೋಷ್ ಬೆಂಬಲ ಇದೆ ಎಂಬುದೆಲ್ಲಾ ಸತ್ಯಕ್ಕೆ ದೂರ. ಇದಕ್ಕೆ ಹೈಕಮಾಂಡ್ ನಾಯಕರ ಯಾವುದೇ ಬೆಂಬಲ ಇಲ್ಲ ಎಂದಿದ್ದಾರೆ. ಅಲ್ಲದೇ ಭಿನ್ನಮತ ಶಮನಕ್ಕೆ ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕೆಂಬ ಬೊಮ್ಮಾಯಿ ಅವರು ಆಗ್ರಹಿಸಿರುವ ವಿಚಾರದ ಬಗ್ಗೆ ಕೂಡ ಪ್ರತಿಕ್ರಿಯಿಸಿದ್ದಾರೆ. ತಟಸ್ಥ ಬಣವನ್ನೂ ನಾನು ನೋಡಿದ್ದೇನೆ..ಯಡಿಯೂರಪ್ಪ ಮಧ್ಯಸ್ಥಿಕೆ ವಹಿಸಬೇಕು ಅಂತಾದರೆ ಮೊದಲು ಯಡಿಯೂರಪ್ಪನವರನ್ನು ಬೈಯುವುದನ್ನು ಮೊದಲು ನಿಲ್ಲಿಸಬೇಕು..ರಾಜ್ಯಾಧ್ಯಕ್ಷನಾಗಿ ಏನು ಮಾಡಬೇಕು ಎಂಬ ಅರಿವು ನನಗೆ ಇದೆ ಎಂದು ಹೇಳಿದ್ದಾರೆ.