ಸ್ಪೆಷಲ್ ಸ್ಟೋರಿ

ವಾಹನಗಳ ಖರೀದಿಗೂ ಮೆಟ್ಟಿಲಾದ ಆನ್​ ಲೈನ್ ಶಾಪಿಂಗ್..! ನೀವು ಶೋರೂಂಗೆ ಹೋಗಬೇಕಿಲ್ಲ, ಮನೆಯಲ್ಲೇ ಕುಳಿತು ಬುಕ್ ಮಾಡಿ

ಮಾನವನ ಬದುಕು ಬದಲಾವಣೆಯತ್ತ ಸಾಗುತ್ತಿದೆ. ಇಡೀ ಜಗತ್ತು ಡಿಜಿಟಲ್ ಮಯವಾಗಿದೆ ಅಂದ್ರೂ ತಪ್ಪಾಗಲ್ಲ. ಏನೇ ಬೇಕಿದ್ರೂ ಅಂಗೈಯಲ್ಲೇ ಪಡೆದುಕೊಳ್ಳುವ ಯುಗ ಇದಾಗಿದೆ. ಆದ್ರೆ ಇಲ್ಲಿಯವರೆಗೂ ಆನ್​ ಲೈನ್ ಶಾಪಿಂಗ್ ಪ್ಲಾಟ್​ ಫಾರ್ಮ್​ಗಳಲ್ಲಿ, ವಾಹನಗಳನ್ನು ಖರೀದಿಸುವ ಆಯ್ಕೆ ಇರಲಿಲ್ಲ. ಆದ್ರೀಗ ಅದಕ್ಕೂ ಕಾಲ ಬಂದಿದೆ.

ಬಟ್ಟೆ, ದಿನಸಿ, ಮೊಬೈಲ್, ಟಿವಿ, ವಾಷಿಂಗ್ ಮಷಿನ್, ಫ್ರಿಡ್ಜ್, ಮಕ್ಕಳ ಆಟಿಕೆಗಳು ಹೀಗೆ ಪ್ರತಿಯೊಂದನ್ನೂ ಆನ್ ಲೈನ್ ಶಾಪಿಂಗ್ ಜೋನ್ ಮನೆ ಬಾಗಿಲಿಗೆ ತಂದು ಕೊಡುತ್ತಿದೆ. ಆಫರ್ ಗಳ ಸುರಿಮಳೆ ಹೆಸರಿನಲ್ಲಿ ಎಲ್ಲಾ ರೀತಿಯ ವಸ್ತುಗಳು, ಜನ ಸಾಮಾನ್ಯರ ಕೈಗೆಟುಕುವಂತೆ ಮಾಡಿದೆ. ಪ್ರತಿಯೊಂದನ್ನೂ ಮಾರುಕಟ್ಟೆಗೇ ಹೋಗಿ ತರಬೇಕೆನ್ನುವ ಸಾಂಪ್ರದಾಯಕ್ಕೆ, ಬಹುತೇಕ ತೆರೆ ಬಿದ್ದಿದೆ. ದಿನ ಬೆಳಗಾದ್ರೆ ಕೆಲಸಕ್ಕೆ ಹೋಗಿ ದುಡಿಮೆ ಮಾಡುವ ತರಾತುರಿಯಲ್ಲಿ, ಅದೇಷ್ಟೋ ಜನ ಮಾರುಕಟ್ಟೆಗಳ ಕಡೆ ಮುಖ ಮಾಡುವುದನ್ನೇ ನಿಲ್ಲಿಸಿದ್ದಾರೆ. ಹೂ, ಹಣ್ಣು, ತರಕಾರಿಯಿಂದ ಹಿಡಿದು ದಿನಸಿ, ಗೃಹ ಬಳಕೆ ವಸ್ತುಗಳು, ಎಲೆಕ್ಟ್ರಿಕ್ ವಸ್ತುಗಳು ಎಲ್ಲವೂ ಆರ್ಡರ್ ಮಾಡಿದ್ರೆ ಸಾಕು ಮನೆ ಬಾಗಿಲಿಗೆ ಬಂದು ನಿಲ್ಲುತ್ತಿವೆ.

 

ಹೀಗೆ ದಿನದಿಂದ ದಿನಕ್ಕೆ ಬದಲಾವಣೆಯತ್ತ ಸಾಗುತ್ತಿರುವ ಆನ್ ಲೈನ್ ಪ್ರಪಂಚ ಒಂದು ಹೆಜ್ಜೆ ಮುಂದಿಟ್ಟಿದೆ. ಅದೇನಂದ್ರೆ ವಾಹನಗಳು  ಕೂಡ ಈಗ ಫ್ಲಿಪ್ ಕಾರ್ಟ್ ನಲ್ಲಿ ಸಿಗುತ್ತಿವೆ. ಪೆಟ್ರೋಲ್ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಇನ್ನುಮುಂದೆ ಫ್ಲಿಪ್ ಕಾರ್ಟ್ ನಲ್ಲಿಯೂ ಖರೀದಿಸುವ ಅವಕಾಶ ನೀಡಿದೆ. ಹೀರೋ, ಬಜಾಜ್, ಟಿವಿಎಸ್, ಓಲಾ, ಚೇತಕ್, ಜಾವ ಸೇರಿ ಇನ್ನೂ ಹಲವು ಬ್ರಾಂಡ್ ಗಳ ದ್ವಿಚಕ್ರ ವಾಹನಗಳನ್ನು, ಇಲ್ಲಿ ಆರ್ಡರ್ ಮಾಡಬಹುದಾಗಿದೆ. ಭಾರತದ 700 ನಗರಗಳಲ್ಲಿ 12 ಸಾವಿರಕ್ಕೂ ಹೆಚ್ಚು ಪಿನ್ ಕೋಡ್ಗಳಿಗೆ, ಈ ದ್ವಿಚಕ್ರ ವಾಹನಗಳನ್ನು ಪೂರೈಸಲಾಗುತ್ತದೆ.