ಕೊಡಗು : ಜಿಲ್ಲೆಯಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ಹೆಚ್ಚಾಗಿದ್ದು, ಹುಲಿದಾಳಿಗೆ ಹಸು ಬಲಿ ಮತೊಂದು ಹಸುವಿಗೆ ಗಾಯಗೊಳಿಸಿದೆ. ಕಾಫಿತೋಟಗಳು, ಗ್ರಾಮದ ಸುತ್ತಮುತ್ತ ಹುಲಿ ಕಾಣಿಕೊಳ್ಳುತ್ತಿದೆ. ಈ ಸಂಬಂಧ ಅರಣ್ಯ ಇಲಾಖೆಯಿಂದ ಹುಲಿ ಸೆರೆ ಕಾರ್ಯಚರಣೆಗೆ ಮುಂದಾಗಿದೆ. ಈ ಘಟನೆ ಪೊಂನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ವ್ಯಾಪ್ತಿಯಲ್ಲಿ ನಡೆದಿದೆ.
ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಭೇಟಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆಗೆ ಕೂಂಬಿಂಗ್ಗ್ ಕಾರ್ಯಚರಣೆಗೆ ಮುಂದಾಗಿದ್ದಾರೆ. ಸಾಕಾನೆಗಳ ಸಹಾಯದಿಂದ ಕೂಂಬಿಂಗ್ ಕಾರ್ಯಚರಣೆ ನಡೆಸಿದ್ದು,
ಹುಲಿ ಹೆಜ್ಜೆ ಜಾಗದಲ್ಲಿ ಅರಣ್ಯ ಇಲಾಖೆ ಬೋನ್ ಇಟ್ಟಿದೆ. ವರ್ಷಗಳ ಹಿಂದೆ ಈ ಭಾಗದಲ್ಲಿ ಮೂವರನ್ನು ಹುಲಿ ಬಲಿ ಪಡೆದಿದೆ. ಕಾಫಿ ತೋಟ ಗ್ರಾಮದ ಸುತ್ತಮುತ್ತ ಸಂಚಾರ ಮಾಡುತ್ತಿದ್ದು, ಜನರು ಜೀವಭಯದಲ್ಲಿ ಒಡಾಡುತ್ತಿದ್ದಾರೆ. ಅರಣ್ಯ ಅಧಿಕಾರಿಗಳ ಜೊತೆ ಇದ್ದು, ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಕಾರ್ಯನಿರ್ವಹಿಸುತ್ತಿದ್ದಾರೆ.
ನಾಲ್ಕು ದಿನದ ಹಿಂದೆ ವೆಸ್ಟ್ ನಮ್ಮಲೆ ಗ್ರಾಮದ ಕಾಫಿ ಬೆಳೆಗಾರ ಮಾಣೀರ ಕಿಶನ್ ಅವರಿಗೆ ಸೇರಿದ ಹಸುವನ್ನು ಹುಲಿ ಬಲಿ ಪಡೆದಿತ್ತು. ಮತೊಂದು ಹಸುವನ್ನ ಗಾಯ ಗೊಳಿಸಿದ್ದ ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.