ಕರ್ನಾಟಕ

ಅಬಕಾರಿ ಇಲಾಖೆವೊಂದರಲ್ಲೇ 500 ಕೋಟಿ ಲೂಟಿ - ಮಾಜಿ ಸಿಎಂ ಕೆಂಡ..!

ಲೋಕಾಯುಕ್ತದಿಂದ ಯಾವುದೇ ಸತ್ಯ ಹೊರಬರುವುದಿಲ್ಲ. ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸುತ್ತೇನೆ. ನನ್ನ ಜೀವನ ತೆರೆದ ಪುಸ್ತಕ, ಪ್ರಾಮಾಣಿಕ ಎನ್ನುವ ನಿಮಗೆ ತಾಕತ್ತಿದ್ದರೆ ಸಿಬಿಐಗೆ ವಹಿಸಬೇಕು. ತನಿಖೆ ನಂತರ ನೀವು ಹೊರಬಂದಾಗ ನಿಮ್ಮ ಯೋಗ್ಯತೆ ಗೊತ್ತಾಗುತ್ತದೆ. ಒಂದು ಕ್ಷಣವೂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಬಾರದು. ತಕ್ಷಣವೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಸಿಎಂ ವಿರುದ್ದ ಮಾಜಿ ಸಿಎಂ ಕೆಂಡಕಾರಿದ್ದಾರೆ.

ರಾಮನಗರ : ಸೋಗಾಲ ಗ್ರಾಮದಲ್ಲಿ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಮಾತನಾಡಿ, 3ಕ್ಕೆ 3 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಚನ್ನಪಟ್ಟಣದಲ್ಲಿ ನಿಖಿಲ್ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ. ನಾವು ಗೆಲ್ಲುವುದರಿಂದ ಸರ್ಕಾರಕ್ಕೆ ತೊಂದರೆ ಆಗಲ್ಲ. ಆದರೆ ಜನಹಿತ ಮರೆತು ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರ ಜಾಗೃತವಾಗಬಹುದು. ಅಬಕಾರಿ ಇಲಾಖೆವೊಂದರಲ್ಲೇ 500 ಕೋಟಿ ಲೂಟಿ ಹೊಡೆದಿದ್ದಾರೆ. ಗುತ್ತಿಗೆದಾರರು ಆಕ್ರೋಶ ವ್ಯಕ್ತಪಡಿಸಿ, ಇನ್ಮುಂದೆ ಕೆಲಸ ಮಾಡಲ್ಲ‌ ಎಂದಿದ್ದಾರೆ. ಹಾಗಾಗಿ ಇಂತಹ ಭ್ರಷ್ಟ ಸರ್ಕಾರ ಕಿತ್ತು ಹಾಕಬೇಕು ಎಂದು ಕಾಂಗ್ರೆಸ್‌ ವಿರುದ್ದ ಕಿಡಿಕಾರಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು, ಈ ಚುನಾವಣೆಯಿಂದ ಸರ್ಕಾರ ಬೀಳಲ್ಲ. ಆದರೆ ಈ ಚುನಾವಣೆಯಿಂದ ಸರ್ಕಾರಕ್ಕೆ ಪಾಠ ಕಲಿಸಬಹುದು ಎಂದರು. ಹಾಗೂ ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ತನಿಖೆ ಎದುರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ತನಿಖೆ ನಂತರ ಯಾರದು ಸುಳ್ಳು‌ ಯಾರದ್ದು ನಿಜ ಗೊತ್ತಾಗಲಿದೆ. ಪ್ರಾಮಾಣಿಕರಾಗಿದ್ರೆ ಸಿಬಿಐ ತನಿಖೆಗೆ ನೀಡಲಿ. ಸತ್ಯಾಂಶ ಹೊರಬರುತ್ತದೆ. ಲೋಕಾಯುಕ್ತದಿಂದ ಯಾವುದೇ ಸತ್ಯ ಹೊರಬರುವುದಿಲ್ಲ. ಸಿಬಿಐಗೆ ವಹಿಸಲಿ ಎಂದು ಒತ್ತಾಯಿಸುತ್ತೇನೆ. ನನ್ನ ಜೀವನ ತೆರೆದ ಪುಸ್ತಕ, ಪ್ರಾಮಾಣಿಕ ಎನ್ನುವ ನಿಮಗೆ ತಾಕತ್ತಿದ್ದರೆ ಸಿಬಿಐಗೆ ವಹಿಸಬೇಕು. ತನಿಖೆ ನಂತರ ನೀವು ಹೊರಬಂದಾಗ ನಿಮ್ಮ ಯೋಗ್ಯತೆ ಗೊತ್ತಾಗುತ್ತದೆ. ಒಂದು ಕ್ಷಣವೂ ಸಿದ್ದರಾಮಯ್ಯ ಅಧಿಕಾರದಲ್ಲಿ ಇರಬಾರದು. ತಕ್ಷಣವೇ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕು ಎಂದು ಸಿಎಂ ವಿರುದ್ದ ಮಾಜಿ ಸಿಎಂ ಕೆಂಡಕಾರಿದ್ದಾರೆ.