ಮಂಡ್ಯ: ರಾಜ್ಯದಲ್ಲಿ ವಕ್ಫ್ ವಿವಾದ ತಾರಕಕ್ಕೇರಿದೆ. ಮಂಡ್ಯದಲ್ಲೂ ಮಾಜಿ ಸಂಸದೆ ಸುಮಲತಾ ಸಹ ವಕ್ಫ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಒಂದು ಗಂಭೀರವಾದ ವಿಚಾರಕ್ಕೆ ಇಂದು ಪ್ರತಿಭಟನೆ ಮಾಡ್ತಿದ್ದೀವಿ. ದೇವಸ್ಥಾನದ ಆಸ್ತಿಯನ್ನು ವಕ್ಪ್ ಆಕ್ರಮಿಸುತ್ತಿದೆ. ಇದು ಬಿಜೆಪಿ ಕಾಲದ ವಿವಾದ ಅಲ್ಲ, ಕಾಂಗ್ರೆಸ್ ಕಾಲದಲ್ಲಿ ಇರುವ ವಿವಾದ. ಜನಸಾಮಾನ್ಯರಿಗೆ ಇವಾಗ ಅದರ ತಿಳುವಳಿಕೆ ಆಗ್ತಿದೆ. ಈಗ ನಮ್ಮ ದೇವಸ್ಥಾನದ ವಿಚಾರಕ್ಕೆ ನಮ್ಮ ಮೇಲೆ ಅನ್ಯಾಯ ನಡಿತಿದ್ರು ನಾವು ಸುಮ್ಮನಿರಬೇಕಾ.? ವಕ್ಫ್ ವಿಚಾರವನ್ನ ನಿರ್ಲಕ್ಷ ಮಾಡಿದ್ರೆ ಮುಂದೆ ಆಗೋ ದುರಂತನ ಸರಿಮಾಡಲು ಆಗಲ್ಲ ಎಂದರು.
ರೈತರ ಜಮೀನು, ದೇವಸ್ಥಾನದ ಜಾಗ ವಕ್ಪ್ ದು ಅಂದ್ರೆ ಮೊಸರಲ್ಲಿ ಕಲ್ಲು ಅಂತ ಹೇಳ್ತಾರಾ? ಬೆಟ್ಟ ತೆಗೆದು ನಮ್ಮ ತಲೆ ಮೇಲೆ ಹಾಕುವ ವಿಷಯ ಇದು. ಬೇರೆ ದೇಶಗಳಲ್ಲಿ ನಡೆದಿರುವುದು ನಮ್ಮ ಕಣ್ಣಿನ ಮುಂದೆ ಇದೆ. ನಮ್ಮ ದೇಶದಲ್ಲಿ ಆಗಬೇಕು ಅನ್ನೋ ಉದ್ದೇಶದಿಂದ ಹೊರಟಿದ್ದಾರೆ. ಎರಡೂ ಸಮುದಾಯದ ನಡುವೆ ದ್ವೇಷ ತಂದು ಅಲ್ಲಲೋ ಕಲ್ಲೋಲ ಮಾಡುವ ಉದ್ದೇಶ ಇದು. ಬಿಜೆಪಿ ಮುನ್ನೆಚ್ಚರಿಕೆ ಕ್ರಮವಾಗಿ ಹೋರಾಟ ಮಾಡುತ್ತಿದೆ ಎಂದರು..
ನಾವು ಯಾವ ಸಮುದಾಯದ ವಿರುದ್ಧವೂ ಅಲ್ಲ. ಒಂದು ಸಮುದಾಯ ಒಲೈಕೆಗಾಗಿ ಸಮಾಜಗಳ ಮಧ್ಯ ವಿಭಜನೆ ಸರಿಯಲ್ಲ ಅಂತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸರ್ಕಾರ ನೋಟಿಸ್ ಕೊಟ್ಟು ವಾಪಸ್ ಪಡೆಯತ್ತೆ ಅಂದ್ರೆ ಅದರ ಉದ್ದೇಶ ಏನು ಅಂತ ಗಮನಿಸಬೇಕು. ಬಿಪಿಎಲ್ ರದ್ದು ಮಾಡೋ ಮೂಲಕ ಬಡವರ ಅನ್ನ ಕಿತ್ಕೊಂಡಿದ್ದಾರೆ. ಎಷ್ಟು ಬಾರಿ ಅಂತ ನಾವು ಯಾಮಾರೋದು. ಉಚಿತ ನಂಬಿಕೊಂಡು ಹೋದ್ರೆ ಮುಂದೆ ನಾವೇ ಅನುಭವಿಸಬೇಕು ಎಂದು ವಾಗ್ದಳಿ ನಡೆಸಿದ್ರು. ವಕ್ಫ್ ವಿರುದ್ದ ಎಲ್ಲರು ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ ಎಂದು ಹೇಳಿದರು.