ಬೆಂಗಳೂರು : ಸಿಸಿಬಿ ಪೊಲೀಸರಿಗೆ ಮಾಜಿ ರೌಡಿ ಸೈಲೆಂಟ್ ಸುನೀಲ ಧಮ್ಕಿ ಹಾಕಿದ್ದಾನೆ. ಕಳೆದ ತಿಂಗಳು ಸುನೀಲನ ಅತ್ಯಾಪ್ತ ಬಲರಾಮ ಮರಣ ಹೊಂದಿದ್ದನು. ಈ ಹಿನ್ನೆಲೆ ನ. 28 ರಂದು ಬಲರಾಮ ನಮನ ಹೆಸ್ರಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸುನೀಲ, ಮಾರ್ಕೆಟ್ ವೇಡಿ, ಒಂಟೆ ರೋಹಿತ್, ಶಿವಮೊಗ್ಗ ಕಾಂತಯ್ಯ @ ಅಯ್ಯ , ಸೆಂದಿಲ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಇವರ ಜೊತೆಗೆ ಪುಡಿರೌಡಿಗಳು ಸಹ ಸಾಕಷ್ಟು ಮಂದಿ ಸೇರ್ಕೊಂಡಿದ್ರು. ಕಾರ್ಯಕ್ರಮ ಆಯೋಜನೆಯ ಬಗ್ಗೆ ಸಿಸಿಬಿ ಪೊಲೀಸ್ರು ಮಾಹಿತಿ ಪಡೆದಿದ್ರು. ಕಾರ್ಯಕ್ರಮದಲ್ಲಿ ಸಂಘಟಿತ ಅಪರಾಧ ದಳದ ( OCW )ಅಧಿಕಾರಿಗಳು ಕಾರ್ಯಕ್ರಮ ವೀಕ್ಷಣೆ ಮಾಡ್ತಿದ್ರು.
ಈ ವೇಳೆ ಪೊಲೀಸರನ್ನ ನೋಡಿದ್ದ ಸುನೀಲ ಮಾಡೋಕೆ ನಿಮಗೆ ಕೆಲಸ ಇಲ್ವಾ . ನಾನ್ ಎಲ್ಲೋದ್ರು ನನ್ ಹಿಂದೆ ಬರ್ತೀರಾ.. ನಾಯಿ ತರ ಫಾಲೊ ಮಾಡ್ತೀರ ಅಂತಾ ಪೊಲೀಸರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದ. ಈ ವೇಳೆ ಸುನೀಲನ ವಶಕ್ಕೆ ಪಡೆಯಲು ಮುಂದಾಗಿ ಕೈ ಹಿಡಿದಿದ್ದ ಸಿಸಿಬಿ ಪೊಲೀಸರನ್ನ ತಳ್ಳಿ ರಾಜಾರೋಷವಾಗಿ ಸುನೀಲ ಕಾರ್ ನಲ್ಲಿ ಹೋಗಿದ್ದಾನೆ. ಸುನೀಲನ ವರ್ತನೆ ವಿರುದ್ಧ ಸಿಸಿಬಿ ಎಎಸ್‌ಐಯಿಂದ ದೂರು ನೀಡಲಾಗಿದೆ. ದೂರಿನ ಆಧಾರದ ಮೇಲೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಸುನೀಲ ಮತ್ತಿತರರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಜೊತೆಗೆ ರೌಡಿಗಳ ಗುಂಪಿಗೆ ಕಾರ್ಯಕ್ರಮ ಮಾಡಲು ಸ್ಥಳ ನೀಡಿದ ಎಂ ಡಿ ಪ್ಯಾಲೇಸ್ ವಿರುದ್ಧವೂ ದೂರು ದಾಖಲಿಸಲಾಗಿದೆ.