ಕರ್ನಾಟಕ

ಫಾರ್ಚುನರ್ ಕಾರು ಡಿಕ್ಕಿ.. 17 ಬೈಕ್​​ ಗಳು ಜಖಂ

ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೆಂಕೆರೆಹಳ್ಳಿ ಗೇಟ್ ಬಳಿ, ರಸ್ತೆ ಬದಿ ನಿಂತಿದ್ದ ಬೈಕ್​ ಗಳಿಗೆ ಫಾರ್ಚುನರ್ ಕಾರೊಂದು ಡಿಕ್ಕಿ ಹೊಡೆದಿದೆ. ಈ ಪರಿಣಾಮ 17 ಬೈಕ್​​ ಗಳು ಜಖಂ ಆಗಿವೆ.

ಫಾರ್ಚುನರ್ ಕಾರೊಂದು ಡಿಕ್ಕಿ ಹೊಡೆದು 17 ಬೈಕ್ ಗಳು ಜಖಂ ಆಗಿರುವ ಘಟನೆ, ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಕೆಂಕೆರೆಹಳ್ಳಿ ಗೇಟ್ ಬಳಿ ನಡೆದಿದೆ. ಜಾವಗಲ್ ಕಡೆಯಿಂದ ಬಾಣಾವರದ ಕಡೆ ತೆರಳುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ 17 ಬೈಕ್ ಗಳ ಮೇಲೆ ಹರಿದಿದೆ. ಬಳಿಕ ಮನೆಯೊಂದಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಈ ಬಗ್ಗೆ ಆಕ್ರೋಶ ಹೊರ ಹಾಕಿದ ಸ್ಥಳೀಯರು ಕಾರು ಚಾಲಕನ ಅತೀ ವೇಗವೇ ಇದಕ್ಕೆ ಕಾರಣ ಎಂದು ಆರೋಪ ಮಾಡಿದ್ದಾರೆ. ಬಾಣಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.