ರಾಯಚೂರು : ಸಹಸ್ರಾರು ಭಕ್ತ ಸಮೂಹದ ಜಯ ಘೋಷಣೆಗಳ ನಡುವೆ ಇದೇ 21 ರಂದು ಬಿಚ್ಚಾಲಮ್ಮ ದೇವಿಯ ದೇವಾಲಯ ಹಾಗೂ ಮೂರ್ತಿ ಪುನರ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ ಎಂದು ಶ್ರೀ ಅಪ್ಪಣಾಚಾರ್ಯ ಟ್ರಸ್ಟನವರು ತಿಳಿಸಿದ್ದಾರೆ. ಶ್ರೀ ಅಪ್ಪಣಾಚಾರ್ಯರ ವಂಶಸ್ಥರಾದ ಬಾಡದ ಶ್ರೀ ರಾಘವೇಂದ್ರ ಆಚಾರ್ಯ ಹಾಗೂ ಅವರ ಸಹೋದರರ ನೇತೃತ್ವದಲ್ಲಿ ನಡೆಯಲಿದೆ.
ರಾಯಚೂರು ಜಿಲ್ಲೆಯ ಪ್ರಸಿದ್ದ ತೀರ್ಥ ಕ್ಷೇತ್ರವಾದ ಬಿಚ್ಚಾಲೆಯ ಶ್ರೀ ಅಪ್ಪಣಾಚಾರ್ಯರಿಂದ ಪ್ರತಿಷ್ಠಾಪಿತ ಶ್ರೀ ರಾಘವೇಂದ್ರ ಸ್ವಾಮಿಗಳ ಏಕಶಿಲಾ ವೃಂದಾವನದ ಬಳಿಯಲ್ಲಿರುವ ಬಿಚ್ಚಾಲೆಯ ಗ್ರಾಮದೇವತೆ ಬಿಚ್ಚಾಲಮ್ಮ ದೇವಿಯ ದೇವಾಲಯ ಜೀರ್ಣೋದ್ಧಾರ ಹಾಗೂ ನವೀಕರಣಗೊಂಡು ಭವ್ಯ ದೇವಾಲಯವಾಗಿ ಕಂಗೊಳಿಸುತ್ತಿದ್ದು, ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ಇದೆ ತಿಂಗಳು ದಿನಾಂಕ 19,20,21,22 ನವೆಂಬರ್ 2024 ರಂದು ಜರುಗಲಿದೆ. ಮಂಗಳವಾರ,ಬುಧುವಾರ ಹಾಗೂ ಗುರುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ಕೊನೆ ದಿನ 22 ಶುಕ್ರವಾರದಂದು ವಿಶೇಷ ಚಂಡಿ ಹೋಮ,ದುರ್ಗಾ ನಮಸ್ಕಾರ, ಈ ಕಾರ್ಯಕ್ರಮದ ಸಾನಿಧ್ಯವನ್ನು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿಗಳಾದ ಶ್ರೀ ಸುಬುದೇಂದ್ರ ತೀರ್ಥರ ಪರಮಾನುಗ್ರಹದಿಂದ ಮತ್ತು ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
ಅಲ್ಲದೇ ಬಿಚ್ಚಾಲೆಯ ಸಾವಿರ ದೇವರ ಸಂಸ್ಥಾನದ ವೀರತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು. ಲೋಕಸಭಾ ಸದಸ್ಯ ಕುಮಾರ್ ನಾಯಕ್ ಸಣ್ಣ ನೀರಾವರಿ ಸಚಿವ ಎನ್ ಎಸ್ ಭೋಸರಾಜ್.ಶಾಸಕರುಗಳಾದ ಬಸನಗೌಡ ದದ್ದಲ್.ಡಾ. ಶಿವರಾಜ್ ಪಾಟೀಲ್.ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್.ಸೇರಿದಂತೆ ಮಂತ್ರಾಲಯದ ಶಾಸಕ ಬಾಲನಾಗಿರೆಡ್ಡಿ ಅವರು ಭಾಗಿಯಾಗಲಿದ್ದಾರೆ.
ನಾಲ್ಕು ದಿನಗಳ ಕಾಲ ನಡೆಯುವ ಧಾರ್ಮಿಕ ಉತ್ಸವದಲ್ಲಿ ಭಾಗಿಯಾಗುವ ಮೂಲಕ ಬಿಚ್ಚಾಲಮ್ಮನ ಕೃಪೆಗೆ ಪಾತ್ರರಾಗಲು ಅಪ್ಪಣಾಚಾರ್ಯರ ವಂಶಸ್ಥರಾದ ಹಿರಿಯ ಶ್ರೀ ಬಾಡದ ಶ್ರೀ ರಾಘವೇಂದ್ರ ಆಚಾರ್ಯ ಹಾಗೂ ಸಹೋದರರು ಸಕಲ ಸದ್ಬಕ್ತರಲ್ಲಿ ಮನವಿಯನ್ನು ಮಾಡಿದ್ದಾರೆ.