ಮಹಾಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ರಾಜ್ಯದ ಬೆಳಗಾವಿಯ ನಾಲ್ವರು ಮೃತಪಟ್ಟಿದ್ದಾರೆ.. ಮೌನಿ ಅಮಾವಾಸ್ಯೆಯಂದು ಪುಣ್ಯಸ್ನಾನದಲ್ಲಿ ಭಾಗಿಯಾಗಲು ಕುಂದಾನಗರಿಯ ವಿವಿಧ ಭಾಗಗಳಿಂದ ಭಕ್ತರು ತೆರಳಿದ್ದರು.. ಆದರೆ ನಿನ್ನೆ ರಾತ್ರಿ ಸಂಗಮ್‌ಘಾಟ್‌ನಲ್ಲಿ ನೂಕುನುಗ್ಗಲು ಉಂಟಾಗಿ, ಕಾಲ್ತುಳಿತ ಸಂಭವಿಸಿತ್ತು.. ಈ ಅವಘಡದಲ್ಲಿ ಬೆಳಗಾವಿಯ ವಡಗಾವಿ ನಿವಾಸಿಗಳಾದ ಜ್ಯೋತಿ ಹತ್ತರವಾಟ (50), ಮೇಘಾ ಹತ್ತರವಾಟ ಉಸಿರು ಚೆಲ್ಲಿದ್ದಾರೆ.. ಕಾಲ್ತುಳಿತದಲ್ಲಿ ಗಾಯಗೊಂಡ ಬಳಿಕ ಅವರನ್ನು ಇಂದು ಬೆಳಗ್ಗೆ ಪ್ರಯಾಗ್ರಾಜ್‌ದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಡಗಾವಿ ನಿವಾಸಿಗಳು ಮೃತಪಟ್ಟಿದ್ದಾರೆ.. ಟ್ರಾವೆಲ್ ಏಜೆನ್ಸಿ ಮೂಲಕ 13 ಜನರ ತಂಡದಲ್ಲಿ ಮಹಾಕುಂಭಮೇಳ ವೀಕ್ಷಣೆಗೆ ತೆರಳಿದ್ದರು.. ಮತ್ತೊಂದೆಡೆ ಬೆಳಗಾವಿ ಮೂಲದ ಅರುಣ್, ಮಹಾದೇವ್ ಕೂಡ ಕಾಲ್ತುಳಿತದಲ್ಲಿ ಜೀವಬಿಟ್ಟಿದ್ದಾರೆ.. ಪುಣ್ಯಸ್ನಾನಕ್ಕೆ ಎಂದು ತೆರಳಿದ್ದವರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.. ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ದುಃಖ ಮಡುಗಟ್ಟಿದೆ..