ಪ್ರಯಾಗ್ ರಾಜ್ ನ ಕುಂಭಮೇಳದ ಕಾಲ್ತುಳಿತದ ದುರಂತದಲ್ಲಿ ಬೆಳಗಾವಿಯ ನಾಲ್ವರು ಮೃತಪಟ್ಟಿರುವ ಮಾಹಿತಿ ದೃಢಪಟ್ಟಿದ್ದು, ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ವಿಧಾನಸೌಧದಲ್ಲಿ ನಡೆದ ಗಾಂಧೀಜಿ ಪುಣ್ಯ ಸ್ಮರಣೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ದುರಂತದಲ್ಲಿ ಮೃತಪಟ್ಟವರನ್ನ ಹಾಗೂ ಯಗೊಂಡವರನ್ನು ಕರೆತರಲು ಏರ್ ಆ್ಯಂಬುಲೆನ್ಸ್ ವ್ಯವಸ್ಥೆಗೊಳಿಸಲಾಗಿದ್ದು, ಬೆಳಗಾವಿಯ ಹಿರಿಯ ಅಧಿಕಾರಿಗಳು ಮೃತರನ್ನ ಬೆಳಗಾವಿಗೆ ಕರೆತರಲಿದ್ದಾರೆ. ಜಿಲ್ಲಾ ಸಚಿವರು ತೆಗೆದುಕೊಳ್ಳಬೇಕಾದ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.