ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ದೇವರ ಮಲ್ಲನಾಯಕನಹಳ್ಳಿ ಎಂಬ ಗ್ರಾಮದಲ್ಲಿ, ನಾಲ್ಕು ದೇವಸ್ಥಾನಗಳ ಬೀಗ ಒಡೆದು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಪುರಾತನ ದೇವಸ್ಥಾನಗಳಲ್ಲೇ ಹುಂಡಿ ಹಣ, ಚಿನ್ನಾಭರಣ ಕಳ್ಳತನ ನಡೆದಿದ್ದು ಈ ಬಗ್ಗೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೇವರ ಮಲ್ಲನಾಯಕನಹಳ್ಳಿ ಗ್ರಾಮದ ಪಡಲದಮ್ಮ ದೇವಸ್ಥಾನ, ಮಸಲಿಕಮ್ಮ ದೇವಸ್ಥಾನ, ಹೊನ್ನಾದೇವಿ ಮತ್ತು ಲಕ್ಷ್ಮಿದೇವಿ ಸೇರಿ ನಾಲ್ಕು ದೇವಸ್ಥಾನಗಳಲ್ಲಿ ಕಳ್ಳತನವಾಗಿದೆ. ಸುಮಾರು 9 ಲಕ್ಷಕ್ಕೂ ಹೆಚ್ಚು ಬೆಳ್ಳಿ ಸಾಮಾಗ್ರಿಗಳು ಮತ್ತು ದೇವರ ಚಿನ್ನದ ಒಡವೆಗಳು ಕದ್ದು ಖತರ್ನಾಕ್ ಕಳ್ಳರು ಪರಾರಿಯಾಗಿದ್ದಾರೆ. ಅಂದರೆ ದೇವರ ತಾಳಿ, ಎರಡು ಬೆಳ್ಳಿ ಕಿರೀಟ, ಬೆಳ್ಳಿ ಛತ್ರಿ, ಬೆಳ್ಳಿ ಮುಖವಾಡ, ಏಳು ಕಳಸ, ಒಂದು ಕೆ.ಜಿ ಮೌಲ್ಯದ ಮುಖ ಸಿರಿ ಸೇರಿ 9 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಒಡವೆಗಳನ್ನು ಕದ್ದು ಪರಾರಿಯಾಗಿದ್ದಾರೆ.