ವೈರಲ್

ಡಿ.ಕೆ. ಸುರೇಶ್‌ ಹೆಸರಲ್ಲಿ ವಂಚನೆ.. ಆರೋಪಿಗಳ ವಶಕ್ಕೆ ಪಡೆಯಲು ಸಿದ್ಧತೆ

ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ. ಸುರೇಶ್‌ ಹೆಸರಿನಲ್ಲಿ ಗೋಲ್ಡ್‌ ಖರೀದಿಸಿ ವಂಚಿಸಿರುವ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ..

ಕಾಂಗ್ರೆಸ್‌ನ ಮಾಜಿ ಸಂಸದ ಡಿ.ಕೆ. ಸುರೇಶ್‌ ಹೆಸರಿನಲ್ಲಿ ಗೋಲ್ಡ್‌ ಖರೀದಿಸಿ ವಂಚಿಸಿರುವ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ.. ಬಂಧಿತ ಆರೋಪಿಗಳನ್ನ ಇಂದು ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.. ಸದ್ಯ ಐಶ್ವರ್ಯಾ ಗೌಡ ಮತ್ತು ಹರೀಶ್ ನ್ಯಾಯಾಂಗ ಬಂಧನಲ್ಲಿದ್ದಾರೆ.. ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಕಸ್ಟಡಿಗೆ ಪಡೆಯಲು ಬೆಂಗಳೂರಿನ ಚಂದ್ರಲೇಔಟ್ ಪೊಲೀಸರ ಸಿದ್ದತೆ ನಡೆಸಿದ್ದಾರೆ.. ಆರೋಪಿಗಳನ್ನ ವಶಕ್ಕೆ ಪಡೆಯಲು 4ನೇ ACMM ಕೋರ್ಟ್‌ಗೆ ಪೊಲೀಸರು ರಿಮ್ಯಾಂಡ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.. ನ್ಯಾಯಾಲಯ ಅನುಮತಿ ಕೊಟ್ಟರೆ ಆರೋಪಿಗಳಾದ ಐಶ್ವರ್ಯಾಗೌಡ, ಹರೀಶ್‌ರನ್ನ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ.. ಪ್ರಕರಣದ ಮತ್ತೊಬ್ಬ ಆರೋಪಿ ನಟ ಧರ್ಮ‌ ಎಸ್ಕೇಪ್‌ ಆಗಿದ್ದು ಪೊಲೀಸರ ಹುಡುಕಾಟ ಮುಂದುವರೆದಿದೆ..