ಕೋಲಾರ : ಸ್ನೇಹಿತನ ಅತ್ತಿಗೆಯ ಮೇಲೆ ಕಣ್ಣಾಕಿದಕ್ಕೆ ಸ್ನೇಹಿತನ್ನು ಹತ್ಯೆಮಾಡಿದ ಘಟನೆಯೊಂದು ನಡೆದಿದೆ. ರೋಹಿದ್ ಎಂಬಾತ ಅತ್ತಿಗೆ ಮೇಲೆ ಕಣ್ಣಾಕಿ ಆಗಾಗ ಪೋನ್ ಮಾಡಿ ಕಿರುಕುಳ ನೀಡಿ ಪುಸಲಾಯಿಸಲು ಯತ್ನಿಸಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಸ್ನೇಹಿತ ಅನ್ನೋದನ್ನು ಮರೆತು ಅಮ್ಜಾದ್, ರೋಹಿತ್ ನನ್ನು ಕೊಲೆ ಮಾಡಿರುವಂತಹ ಘಟನೆ ಕೋಲಾರದ ಜಮಾಲ್ ಷಾ ನಗರದಲ್ಲಿ ನಡೆದಿದೆ.
ಹೌದು, ಅಮ್ಜಾದ್ ಹಾಗೂ ರೋಹಿದ್ ಎಂಬುವರು ಸ್ನೇಹಿತರಾಗಿದ್ದರು. ಅಮ್ಜಾದ್ ಆಗಾಗ ರೋಹಿದ್ ಮನೆಗೆ ಬಂದು ಹೋಗುತ್ತಿದ್ದ, ರೋಹಿದ್ ಅತ್ತಿಗೆ ಮೇಲೆ ಕಣ್ಣಾಕಿ ಆಗಾಗ ಪೋನ್ ಮಾಡಿ ಕಿರುಕುಳ ನೀಡುತ್ತಿದ್ದನು. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಸ್ನೇಹಿತ ಅನ್ನೋದನ್ನು ಮರೆತು ಅಮ್ಜಾದ್, ರೋಹಿದ್ ನನ್ನು ಕೊಲೆ ಮಾಡಿದ್ದಾನೆ.
ಅಮ್ಜಾದ್ ಮತ್ತೆ ರೋಹಿದ್ ಎದುರಲ್ಲಿಯೇ ಅವರ ಅತ್ತಿಗೆಗೆ ವಿಡಿಯೋ ಕಾಲ್ ಮಾಡಿದ್ದಾನೆ. ಇದನ್ನು ನೋಡಿದ್ದ ರೋಹಿದ್ ವಾರ್ನಿಂಗ್ ಮಾಡಿದ್ದನು. ಇನ್ನು ನಿನ್ನೆ ಬೆಂಗಳೂರಿಗೆ ಕೆಲಸದ ಮೇಲೆ ಹೋಗಿದ್ದ ರೋಹಿದ್ ರಾತ್ರಿ ವಾಸಪ್ ಬರುತ್ತಿದ್ದಂತೆ ನಿನ್ನ ಜೊತೆಗೆ ಮಾತನಾಡಬೇಕು ಬಾ ಎಂದು ಅಮ್ಜಾದ್ ಕರೆದಿದ್ದಾನೆ. ಅಮ್ಜಾದ್ ಕರೆದ ಜಾಗಕ್ಕೆ ರೋಹಿದ್ ಹೋಗಿದ್ದಾನೆ. ಈ ವೇಳೆ ಜಗಳ ತೆಗೆದು ರೋಹಿದ್ ಎದೆಗೆ ಚಾಕುವಿನಿಂದ ಇರಿದು ಆರೋಪಿ ಅಮ್ಜಾದ್ ಪರಾರಿಯಾಗಿದ್ದಾನೆ.
ಈ ವಿಷಯ ತಿಳಿದು ಕೋಲಾರ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಅಮ್ಜದ್ ನನ್ನು ಬಂಧಿಸಿದ್ದಾರೆ. ಇತ್ತ ಮಾಡಿದ ತಪ್ಪನ್ನು ಪ್ರಶ್ನೆ ಮಾಡಿದ್ದಕ್ಕೆ ರೋಹಿದ್ ಕುಟುಂಬ ಇವತ್ತು ಅನಾಥವಾಗಿ ಕಣ್ಣೀಕು ಹಾಕುವಂತಾಗಿದೆ.