ತಂತ್ರಜ್ಞಾನ

ಇನ್ಮುಂದೆ ಭಾರತದಲ್ಲಿಯೇ ತಯಾರಾಗುತ್ತವೆ ಆಪಲ್‌ ಐಪಾಡ್‌ಗಳು..!

ಭಾರತದಲ್ಲಿ ಎಲೆಕ್ಟ್ರಾನಿಕ್‌ ಉತ್ಪಾದನ ಕ್ಷೇತ್ರವನ್ನ ವಿಸ್ತರಿಸುವ ದೃಷ್ಟಿಯಿಂದ ಆಪನ್‌ ಈ ನಿರ್ಧಾರವನ್ನ ಕೈಗೊಂಡಿದೆ. ಭಾರತದಲ್ಲೇನಾದರು ಆಪಲ್‌ ಏರ್‌ಪಾಡ್‌ಗಳನ್ನ ಉತ್ಪಾದಿಸಿದ್ದೇ ಆದರೆ, ಈ ಐಪಾಡ್‌ಗಳು ಭಾರತೀಯ ಗ್ರಾಮಕರಿಗೆ ಕಡಿಮೆ ಬೆಲೆಗಳಲ್ಲಿ ಸಿಗಬಹುದೇ ಎಂಬ ಅನುಮಾನವೀಗ ಹೆಚ್ಚಾಗಿದೆ.

ಟೆಕ್‌ ಮಾರುಕಟ್ಟೆಯ ದೈತ್ಯ ಬ್ರ್ಯಾಂಡ್‌ ಆಪಲ್‌ ಕಂಪನಿ ಭಾರತದಲ್ಲೊಂದು ಹೊಸ ಹೆಜ್ಜೆಯನ್ನಿಡಲು ಸಜ್ಜಾಗಿದೆ. ಹೌದು, ಆಪಲ್‌ ಕಂಪನಿಯು ಭಾರತದಲ್ಲಿ ಏರ್‌ಪಾಡ್‌ಗಳನ್ನ ಉತ್ಪಾದಿಸಲು ಭರ್ಜರಿ ತಯಾರಿಯನ್ನ ನಡೆಸುತ್ತಿದೆ. ಚೀನಾದಿಂದ ಹೊರಗೆ ಉತ್ಪಾದನೆಯನ್ನ ವಿಸ್ತರಿಸುವ ದೃಷ್ಟಿಯಿಂದ ನೂತನ ಪ್ರಯತ್ನಕ್ಕೆ ಆಪಲ್ ಕಂಪನಿ ಕೈ ಹಾಕಿದೆ. 

ಭಾರತದಲ್ಲಿ ಎಲೆಕ್ಟ್ರಾನಿಕ್‌ ಉತ್ಪಾದನ  ಕ್ಷೇತ್ರವನ್ನ ವಿಸ್ತರಿಸುವ ದೃಷ್ಟಿಯಿಂದ ಆಪನ್‌ ಈ ನಿರ್ಧಾರವನ್ನ ಕೈಗೊಂಡಿದೆ. ಭಾರತದಲ್ಲೇನಾದರು ಆಪಲ್‌ ಏರ್‌ಪಾಡ್‌ಗಳನ್ನ ಉತ್ಪಾದಿಸಿದ್ದೇ ಆದರೆ, ಈ ಐಪಾಡ್‌ಗಳು ಭಾರತೀಯ ಗ್ರಾಮಕರಿಗೆ ಕಡಿಮೆ ಬೆಲೆಗಳಲ್ಲಿ ಸಿಗಬಹುದೇ ಎಂಬ ಅನುಮಾನವೀಗ ಹೆಚ್ಚಾಗಿದೆ.

ಭಾರತದ ಯಾವ ಸ್ಥಳದಲ್ಲಿ ಏರ್‌ಪಾಟ್‌ಗಳ ಉತ್ಪಾದನೆಗೆ ಆಪಲ್‌ ಕೈಹಾಕಿದೆ?
ಆಪಲ್‌ಗೆ ಪ್ರಮುಖ ಸರಬರಾಜುದಾರರಾದ ಫಾಕ್ಸ್ಕಾನ್ ಟೆಕ್ನಾಲಜಿ ಗ್ರೂಪ್, ತೆಲಂಗಾಣ ರಾಜ್ಯದ ಹೈದ್ರಾಬಾದ್ನಲ್ಲಿನ ಹೊಸ ಕಾರ್ಖಾನೆಯನ್ನ ನಿರ್ಮಿಸಿ  ಏರ್‌ಪಾಡ್ಸ್‌ಗಳ ಉತ್ಪಾದನೆಯನ್ನು ನಿಭಾಯಿಸಲಿದೆ. 

ಇನ್ನೂ ಈ ಉತ್ಪಾದನೆ ಮೇಲೆ ಸ್ಥಳೀಯ ತೆರಿಗೆಗಳು, ಉತ್ಪಾದನೆ ವೆಚ್ಚಗಳು, ಬೇಡಿಕೆ ಮತ್ತು ಆಪಲ್‌ನ ಬೆಲೆಯ ನೀತಿ ಸೇರಿ ಹಲವು ಅಂಶಗಳು ಪ್ರಬಾವ ಬೀರಲಿದೆ. ಇನ್ನೂ ಸ್ಥಳೀಯವಾಗಿ ಏರ್‌ ಪಾಡ್‌ಗಳು ಬೇಗನೆ ಕೈಸೇರುವುದರಿಂದ ದೀರ್ಘಕಾಲಿಕವಾಗಿ ವೆಚ್ಚವನ್ನು ಕಡಿತಗೊಳಿಸಲು ಸಹಕಾರಿಯಾಗಿದೆ.