ಮಂಡ್ಯ : ಟಿ.ಕೆ. ಹಳ್ಳಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಭಾಷಣ ಮಾಡಿದ್ದು, ಐದನೇ ಹಂತದ ಯೋಜನೆಗೆ ಸಿದ್ದರಾಮಯ್ಯ ಅವರು ಚಲನೆ ಕೊಟ್ಟಿದ್ದಾರೆ. ಈಗ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಿದ್ದಾರೆ. ಇದು ನಮ್ಮ ಪುಣ್ಯವಾಗಿದೆ. ಎತ್ತಿನ ಹೊಳೆ ಯೋಜನೆ ಸಾಧ್ಯನಾ ಎಂದು ಕುಮಾರಸ್ವಾಮಿ ಹಾಗೂ ಹಲವರು ಟೀಕೆ ಮಾಡಿದ್ರು. ಟೀಕೆಗಳು ಸತ್ತಿವೆ, ಕೆಲಸಗಳು ಬದುಕಿವೆ. 174 ಟಿಎಂಸಿ ನೀರನ್ನು ತಮಿಳುನಾಡಿಗೆ ಕೊಡಬೇಕಿತ್ತು. ಈಗ 217 ಟಿಎಂಸಿ ನೀರು ತಮಿಳುನಾಡಿಗೆ ಹೋಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಮಂಡ್ಯದಲ್ಲಿ ಮಾತನಾಡಿದ ಅವರು, ನಾವು ಮೇಕೆದಾಟು ಯೋಜನೆಗೆ ಹೋರಾಟ ಮಾಡಿದ್ದೋ. ಹಂತ ಹಂತವಾಗಿ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಿದ್ದೇವೆ. ಸಾಧನೆಗಳ ಮೂಲಕ ಜನರ ಮಧ್ಯ ನಾವು ಇರಬೇಕು. ಎಲ್ಲಾ ಕ್ಷೇತ್ರಗಳಲ್ಲೂ ನಾವು ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ. ಮೇಕೆದಾಟು ಯೋಜನೆಗೆ ತಯಾರು ಮಾಡ್ತಾ ಇದೀವಿ. ನಮಗೆ ಮೇಕೆದಾಟು ಯೋಜನೆಯ ಭೂಮಿ ಪೂಜೆ ಮಾಡುವ ಶಕ್ತಿ ಚಾಮುಂಡಿ ತಾಯಿ ಕೊಡ್ತಾಳೆ.

ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಮೇಕೆದಾಟು ಯೋಜನೆಗೆ ಚಾಲನೆ ನೀಡ್ತೀವಿ. ನಾವು ಪರಿಶುದ್ಧವಾದ ಆಡಳಿತ ಮಾಡ್ತಾ ಇದೀವಿ. ಹಣ್ಣು ಚನ್ನಾಗಿ ಇದ್ರೆ ಕಲ್ಲು ಹೊಡೆಯುತ್ತಾರೆ. ಕಲ್ಲು ಹೊಡೆಯೊರಿಗೆ ನಾವು ತಲೆ ಕೆಡಿಸಿಕೊಳ್ಳಲ್ಲ. ಪಕ್ಷ ಭೇದವಿಲ್ಲದೆ ನಮಗೆ ಬೆಂಬಲ ನೀಡಿದ್ದಾರೆ. ರಾಜಕೀಯದಲ್ಲಿ ವ್ಯತ್ಯಾಸವಿದ್ದರು ಸಹಕಾರ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಎಲ್ಲಾ ಹಳ್ಳಿಗೂ ನೀರು ಹರಿಸುತ್ತೇವೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸರ್ಕಾರ ಎಲ್ಲಾ ಕೆಲಸ ಮಾಡುತ್ತೆ ಎಂದರು.