ದೇಶ

ಗಗನಯಾನ ಯೋಜನೆ… ಗಗನಯಾತ್ರಿಗಳ ಮೊದಲ ಹಂತದ ತರಬೇತಿ ಯಶಸ್ವಿ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಗಗನಯಾನ ಮಿಷನ್‌ಗಾಗಿ ಆಯೋಜಿಸಿದ್ದ ಗಗನಯಾತ್ರಿಗಳ ಮೊದಲ ಹಂತದ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ.

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ನಾಸಾ ಜಂಟಿಯಾಗಿ ಗಗನಯಾನ ಮಿಷನ್‌ಗಾಗಿ ಆಯೋಜಿಸಿದ್ದ ಗಗನಯಾತ್ರಿಗಳ ಮೊದಲ ಹಂತದ ತರಬೇತಿ ಯಶಸ್ವಿಯಾಗಿ ಪೂರ್ಣಗೊಂಡಿದೆ.

ಗಗನಯಾತ್ರೆಗಾಗಿ ಆಯ್ಕೆಯಾಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮತ್ತು ಗ್ರೂಪ್ ಕ್ಯಾಪ್ಟನ್ ಪ್ರಶಾಂತ್ ಬಾಲಕೃಷ್ಣನ್ ನಾಯರ್ ಅಮೆರಿಕದಲ್ಲಿ ತಮ್ಮ ಆರಂಭಿಕ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಈ ಆರಂಭಿಕ ತರಬೇತಿ ಆಗಸ್ಟ್ನಲ್ಲಿ ಆರಂಭವಾಗಿತ್ತು.. ಇದರಲ್ಲಿ ಗಗನಯಾತ್ರಿಗಳನ್ನು ಮಿಷನ್ನಲ್ಲಿ ಅವರ ಪಾತ್ರಗಳಿಗಾಗಿ ಸಿದ್ಧಪಡಿಸುವತ್ತ ಗಮನ ಹರಿಸಲಾಗಿದೆ. ಈ ತರಬೇತಿಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ವ್ಯವಸ್ಥೆಗಳನ್ನು ಗಗನಯಾತ್ರಿಗಳಿಗೆ ಪರಿಚಯಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.

ಮೊದಲ ಹಂತದ ತರಬೇತಿಯ ಬಳಿಕ ಮುಂದಿನ ಹಂತಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ತರಬೇತಿಯನ್ನು ನೀಡಲಾಗುತ್ತದೆ. ಮೈಕ್ರೊಗ್ರಾವಿಟಿಯಲ್ಲಿ ವೈಜ್ಞಾನಿಕ ಸಂಶೋಧನಾ ಪ್ರಯೋಗಗಳು ಮತ್ತು ಸ್ಪೇಸ್ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯ ಕಾರ್ಯಾಚರಣೆಯ ತರಬೇತಿಯ ಮೇಲೆಯೂ ಗಮನಹರಿಸಲಾಗುವುದು ಎಂದು ಇಸ್ರೋ ತಿಳಿಸಿದೆ.

ಭಾರತದ ಮಹತ್ವಾಕಾಂಕ್ಷೆಯ ಗಗನಯಾನದ ಭಾಗವಾಗಿ ಗಗನಯಾತ್ರಿಗಳನ್ನು ಹೊತ್ತ ನೌಕೆ 2026 ರಲ್ಲಿ ಬಾಹ್ಯಾಕಾಶಕ್ಕೆ ಚಿಮ್ಮಲಿದೆ. ಗಗನಯಾನ ಯಶಸ್ವಿಯಾದರೆ ಇಸ್ರೋದ ಮುಡಿಗೆ ಮತ್ತೊಂದು ಸಾಧನೆಯ ಗರಿ ಮೂಡಲಿದೆ.

🚀 Gaganyaan on a Global Stage 🌏

The initial phase of training for Gaganyatris, part of the historic ISRO-NASA joint mission to the International Space Station, has been successfully completed.

Prime Crew: Group Captain Shubhanshu Shukla
Backup Crew: Group Captain Prasanth…