ಜನವರಿ 30ರಂದು 1948ರಂದು ಮತಾಂದ ನಾಥೂರಾಮ್ ಗೋಡ್ಸೆ ಗಾಂಧೀಜಿಯವರನ್ನ ಗುಂಡಿಟ್ಟು ಹತ್ಯೆ ಮಾಡಿದ್ರು. ಗೋಡ್ಸೆ ಗಾಂಧೀಜಿ ಅವರನ್ನ ಗುಂಡಿಟ್ಟು ಕೊಂದುರಬಹುದು. ಆದ್ರೆ ಗಾಂಧೀಜಿ ಮೌಲ್ಯಗಳನ್ನ ಕೊಲ್ಲಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಇಂದಿಗೂ ಗಾಂಧೀಜಿ ಅವರ ವಿಚಾರ, ಮೌಲ್ಯಗಳು ಭಾರತ ದೇಶದಲ್ಲಿ ಪ್ರಸ್ತುತ. ಗಾಂಧೀಜಿಯವರು ಒಂದು ಸಂದೇಶ ಅಂತ ಬಿಟ್ಟು ಹೋಗಿದ್ದಾರೆ. ಜಗತ್ತಿನಲ್ಲಿ ಸತ್ಯ, ಅಹಿಂಸೆ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಎಲ್ಲೂ ಕಾಣಲು ಸಾಧ್ಯವಿಲ್ಲ. ಬಹಳ ಧೀರ್ಘ ಕಾಲ ಹೋರಾಟ ಮಾಡಿದ್ರು, ನಾಯಕತ್ವ ವಹಿಸಿದ್ರು. ದೇಶವನ್ನ, ದೇಶದ ಜನರ ಬದುಕನ್ನ ಅರ್ಥ ಮಾಡಿಕೊಂಡು ಹೋರಾಟ ಆರಂಭಿಸಿದ್ರು. ಸಾವಿರಾರು ಜನ ಹೋರಾಟದಲ್ಲಿ ಭಾಗಿಯಾಗಿದ್ರು. ಗಾಂಧೀಜಿಯವರ ಹೋರಾಟದ ಫಲವಾಗಿ ಸ್ವಾತಂತ್ರ್ಯ ಬಂತು. ಬ್ರಿಟೀಷರ ದಾಸ್ಯದಿಂದ ಮುಕ್ತಿ ಬಂತು ಸಿಎಂ ಸಿದ್ದರಾಮಯ್ಯ ಗಾಂಧಿಯವರ ಹೋರಾಟದ ಹಾದಿಯನ್ನ ನೆನೆದಿದ್ದಾರೆ.