ಕರ್ನಾಟಕ
ನಾಗಬಂಧಂ ಚಿತ್ರದ ಹಾಡಿಗೆ ಪುಷ್ಪ 2 ಖ್ಯಾತಿಯ ಗಣೇಶ್ ಆಚಾರ್ಯ ಕೊರಿಯೋಗ್ರಫಿ
ಯುವ ನಾಯಕ ವಿರಾಟ್ ಕರ್ಣ್ ಬಹುನಿರೀಕ್ಷಿತ ಪ್ಯಾನ್- ಇಂಡಿಯಾ ಚಿತ್ರ "ನಾಗಬಂಧಂ" ಈಗಾಗಲೇ ಪೋಸ್ಟರ್ ಮೂಲಕ ಹೈಪ್ ಕ್ರಿಯೇಟ್ ಮಾಡಿದೆ."ನಾಗಬಂಧಂ" ಎಂಬ ಈ ಪ್ಯಾನ್-ಇಂಡಿಯನ್ ಚಿತ್ರವು ಎಲ್ಪದ್ಮನಾಭಸ್ವಾಮಿ ಮತ್ತು ಪುರಿ ಜಗನ್ನಾಥ ದೇವಾಲಯಗಳಲ್ಲಿ ಇತ್ತೀಚೆಗೆ ಪತ್ತೆಯಾದ ಗುಪ್ತ ನಿಧಿಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾ, ಈ ಪವಿತ್ರ ಸ್ಥಳಗಳನ್ನು ಸಂರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.
ವಿರಾಟ್ ಕರ್ಣ್ ನಾಯಕನಾಗಿ ನಟಿಸಿರುವ, ಅಭಿಷೇಕ್ ನಾಮ ನಿರ್ದೇಶನದ, ಪ್ಯಾನ್-ಇಂಡಿಯಾ ಚಿತ್ರ "ನಾಗಬಂಧಂ". ನಾಯಕ ವಿರಾಟ್ ಕರ್ಣ್ ಮತ್ತು ನಟಿಯರಾದ ನಭಾ ನಟೇಶ್ ಮತ್ತು ಐಶ್ವರ್ಯ ಮೆನನ್ ಒಳಗೊಂಡ ಈ ಚಿತ್ರದ ಹಾಡಿನ ಶೂಟಿಂಗ್ ನಡೆಯುತ್ತಿದ್ದು, ಗಣೇಶ್ ಆಚಾರ್ಯ ನೃತ್ಯ ನಿರ್ದೇಶನ ಮಾಡುತ್ತಿದ್ದಾರೆ.
ಯುವ ನಾಯಕ ವಿರಾಟ್ ಕರ್ಣ್ ಬಹುನಿರೀಕ್ಷಿತ ಪ್ಯಾನ್- ಇಂಡಿಯಾ ಚಿತ್ರ "ನಾಗಬಂಧಂ" ಈಗಾಗಲೇ ಪೋಸ್ಟರ್ ಮೂಲಕ ಹೈಪ್ ಕ್ರಿಯೇಟ್ ಮಾಡಿದೆ."ನಾಗಬಂಧಂ" ಎಂಬ ಈ ಪ್ಯಾನ್-ಇಂಡಿಯನ್ ಚಿತ್ರವು ಎಲ್ಪದ್ಮನಾಭಸ್ವಾಮಿ ಮತ್ತು ಪುರಿ ಜಗನ್ನಾಥ ದೇವಾಲಯಗಳಲ್ಲಿ ಇತ್ತೀಚೆಗೆ ಪತ್ತೆಯಾದ ಗುಪ್ತ ನಿಧಿಗಳಿಂದ ಸ್ಫೂರ್ತಿ ಪಡೆದ ಈ ಸಿನಿಮಾ, ಈ ಪವಿತ್ರ ಸ್ಥಳಗಳನ್ನು ಸಂರಕ್ಷಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಭಾರತದ ವಿಷ್ಣು ದೇವಾಲಯಗಳ ಸುತ್ತಲಿನ ರಹಸ್ಯಗಳನ್ನು ಈ ಸಿನಿಮಾ ತೆರೆದಿಡಲಿದೆ.
ಈ ಚಿತ್ರದಲ್ಲಿ, ವಿರಾಟ್ ಕರ್ಣ್ ನಾಯಕನಾಗಿ ನಟಿಸಿದ್ದಾರೆ. ನಭಾ ನಟೇಶ್ ಮತ್ತು ಐಶ್ವರ್ಯಾ ಮೆನನ್ ನಾಯಕಿಯರಾಗಿ ನಟಿಸಿದ್ದಾರೆ. ಜಗಪತಿ ಬಾಬು, ರಿಷಭ್ ಸಹಾನಿ, ಜಯಪ್ರಕಾಶ್, ಜಾನ್ ವಿಜಯ್, ಮುರಳಿ ಶರ್ಮಾ, ಅನಸೂಯಾ, ಶರಣ್ಯ, ಈಶ್ವರ್ ರಾವ್, ಜಾನ್ ಕೊಕ್ಕಿನ್, ಅಂಕಿತ್ ಕೊಯ್ಯ, ಸೋನಿಯಾ ಸಿಂಗ್, ಮ್ಯಾಥ್ಯೂ ವರ್ಗಾಸ್, ಜೇಸನ್ ಶಾ, ಬಿ.ಎಸ್. ಅವಿನಾಶ್ ಮತ್ತು ಬೇಬಿ ಕಿಯಾರಾ ಪ್ರಮುಖ ಪಾತ್ರಗಳಲ್ಲಿದ್ದಾರೆ. "ನಾಗಬಂಧಂ" 2025 ರಲ್ಲಿ ತೆಲುಗು, ಹಿಂದಿ, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಪ್ಯಾನ್-ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದೆ