ಗಣೇಶ ಹಬ್ಬ ಬಂತು ಅಂದ್ರೆ ಸಾಕು ನಮ್ಮ ಯುವಕರಿಗೆ ಅದೆಲ್ಲಿಲ್ಲದ ಹುರುಪು, ತಾವಿರೋ ಏರಿಯಾದಲ್ಲಿ ಚಂದಾ ಎತ್ತಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಿ, ಆರ್ಕೆಸ್ಟ್ರಾ ಏರ್ಪಡಿಸಿ, ಕನ್ನಡದ ನವಿರಾದ ಹಾಡುಗಳು, ಡ್ಯಾನ್ಸ್ ನಂಬರ್ ಗಳನ್ನು ಹಾಡಿಸೋದು ಮೊದಲಿಂದಲೂ ಬಂದಿದೆ. ಇದರ ಜೊತೆಗೆ ಸ್ಟಾರ್ ನಟರನ್ನು ತಮ್ಮ ಏರಿಯಾಗೆ ಕರಿಸಬೇಕು ಅನ್ನೋ ಹಂಬಲವೂ ಕೆಲವರಲ್ಲಿ ಇರುತ್ತೆ..ಈ ಬಾರಿ ದರ್ಶನ್ ಬಳ್ಳಾರಿ ಜೈಲಿನಲ್ಲಿರೋದ್ರಿಂದ ಅಲ್ಲಿ ಹೇಗೆ ಗಣೇಶೋತ್ಸವ ಅನ್ನೋದನ್ನ ನೋಡೋದಾದ್ರೆ..ಈ ಬಾರಿ ಬಳ್ಳಾರಿ ಜೈಲಿನಲ್ಲಿ 4 ಅಡಿ ಗಣಪನನ್ನ ಪ್ರತಿಷ್ಠಾಪಿಸಲಾಗಿದ್ಯಂತೆ. ಇದರ ಜೊತೆಗೆ ಚಪ್ಪರದ ಅಲಂಕಾರವನ್ನೂ ಮಾಡಲಾಗಿದೆ. ಆದ್ರೆ ಈ ಬಾರಿ ದರ್ಶನ್ ಜೈಲಿನಲ್ಲಿರೋ ಕಾರಣ ಸರಳವಾಗಿ ಗಣೇಶೋತ್ಸವ ಆಚರಿಸಲು ಜೈಲಿನ ಅಧಿಕಾರಿಗಳು ಸೂಚಿಸಿದ್ದಾರೆ ಅಂತಾ ಹೇಳಲಾಗ್ತಿದೆ..