ಬ್ಯುಸಿನಸ್ ಮ್ಯಾನ್ ಒಬ್ಬರು, ಕೊರೋನಾದಲ್ಲಿ ಲಾಸಾಗಿದ್ದು, ನಷ್ಟ ತೀರಿಸಿಕೊಳ್ಳೋಕೆ ಆನ್ ಲೈನ್ ಫ್ರಾಡ್ ಗಿಳಿಗೆ ಬಿಟ್ಟಿದ್ದಾರೆ. ಹಣ ಡಬಲ್ ಮಾಡ್ಕೊಡ್ತೀವಿ ಅಂದ್ಕೊಂಡೇ ಕೋಟಿ ಕೋಟಿ ಪಂಗನಾಮ ಹಾಕಿದ್ದರು. ಶೇರು ಮಾರುಕಟ್ಟೆಗೆ ಹಣ ಹೂಡ್ತೀವಿ ವರ್ಷ ಆಗೋದ್ರೊಳಗೆ ಕೋಟ್ಯಾಧೀಶ್ವರನ್ನಾಗಿಸ್ತೀವಿ. ಹೀಗೆಳ್ಕೊಂಡೇ ವಂಚಿಸ್ತಿದ್ದ ಆನ್ ಲೈನ್ ಫ್ರಾಡ್ ಗ್ಯಾಂಗ್ ಇದೀಗ ಅರೆಸ್ಟ್ ಆಗಿದೆ.
ಈಶಾನ್ಯ ವಿಭಾಗದ ಸೆನ್ ಪೊಲೀಸರಿಂದ ನಾಲ್ವರು ವಂಚಕರ ಅರೆಸ್ಟ್ ಆಗಿದ್ದಾರೆ. ಮಂಜುನಾಥ, ಸೆಂಥಿಲ್, ಶರತ್ ಕುಮಾರ್, ರಾಜ್ ಕುಮಾರ್ ವಜ್ರಾನಿ ಬಂಧಿತ ಆರೋಪಿಗಳು. ದುಬೈಗೆ ಪರಾರಿಯಾಗಿರೋ ಇನ್ನೊಬ್ಬ ಆರೋಪಿಗಾಗಿ ಪೊಲೀಸರ ಹುಡುಕಾಟ ನಡೆಸಿದ್ದಾರೆ. VPN ಇಂಟರ್ನೆಟ್ ಬಳಸಿಕೊಂಡು ಇನ್ಸ್ಟಾ, ಟೆಲಿಗ್ರಾಂನಲ್ಲೇ ಇನ್ವೆಸ್ಟರ್ ಗಳಿಗೆ ಕಾಳು ಹಾಕುತ್ತಿದ್ದರು. ವಾಟ್ಸಪ್ ಗ್ರೂಪ್ ನಲ್ಲಿ ಫೇಕ್ ಗ್ರೂಪ್ ಕ್ರಿಯೇಟ್ ಮಾಡಿ ಹಣ ಇನ್ವೆಸ್ಟ್ ಮಾಡೋಕೆ ಖೆಡ್ಡಾ ತೋಡ್ತಿದ್ದ ಖದೀಮರು ಅರೆಸ್ಟ್ ಆಗಿದ್ದಾರೆ.
ಆಟೋ ಚಾಲಕರಿಗೆ ಕೈಗೆ ಹಣ ಇಟ್ಟು ಕೆವೈಸಿ ದಾಖಲೆಗಳನ್ನ ಪಡೆದು ಫೇಕ್ ಅಕೌಂಟ್ ಕ್ರಿಯೇಟ್ ಮಾಡ್ತಿದ್ರು. ಬಂಧಿತರ ಪೈಕಿ ಮಂಜುನಾಥ ಈ ಹಿಂದೆ ಮೆಡಿಸಿನ್ ಡಿಸ್ಟ್ರಿಬ್ಯೂಟರ್ ಆಗಿದ್ದ. ಕೋಟಿ ಕೋಟಿ ಕಣ್ಣಾರೆ ನೋಡಿದ್ದವ್ನು ಕೊರೋನಾದಲ್ಲಿ ಪೈಸೆ ಪೈಸೆಗೂ ಅಲೆದಾಡಿದ್ದನಂತೆ. ಲಾಸಿನ ಕಾಸನ್ನ ಸರಿದೂಗಿಸೋಕೆ ಆನ್ ಲೈನ್ ಫ್ರಾಡ್ ಗ್ಯಾಂಗನ್ನೇ ಮಂಜುನಾಥ್ ಹುಟ್ಟಾಕಿದ್ದನು.