ಶಾಸಕರ ಖರೀದಿಗೆ ಆಫರ್ ಮಾಡಿರೋದು 50 ಕೋಟಿ ಅಲ್ಲ.. 100 ಕೋಟಿ. ಬಿಜೆಪಿಯವರು ಶಾಸಕರ ಭೇಟಿಯ ಆಡಿಯೋ, ವಿಡಿಯೋ ರೆಕಾರ್ಡ್ ಇದೆ ಸಮಯ ನೋಡಿ ಬಿಡ್ತೀವಿ ಎಂದು, ಕಾಂಗ್ರೆಸ್ ಶಾಸಕ ಗಣಿಗ ಪಿ.ರವಿಕುಮಾರ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಅವರು, ನಮ್ಮ ಮುಖ್ಯಮಂತ್ರಿಗಳು ಹೇಳಿರುವುದರಲ್ಲಿ ಸತ್ಯ ಇದೆ. ನಮ್ಮ MLAಗಳನ್ನ ವಿರೋಧ ಪಕ್ಷದವರು ಎಲ್ಲಿ ಭೇಟಿ ಮಾಡಿದ್ರು? ಎಲ್ಲಿ ಸ್ಪೀಕರ್ ಹಾಕಿದ್ರು, ಯಾವ ಗೆಸ್ಟ್ ಹೌಸ್ ಗೆ ಬಂದಿದ್ರು? ಯಾವ ಏರ್ಪೋರ್ಟ್ ನಲ್ಲಿ ಸಿಕ್ಕಿದ್ರು.? ಯಾವ ಹೋಟೆಲ್ ನಲ್ಲಿ ಬಂದು ಭೇಟಿ ಮಾಡಿದ್ರು ಅನ್ನೋದರ ವಿಡಿಯೋ, ಆಡಿಯೋ ರೆಕಾರ್ಡ್ ಇದೆ. ಅದನ್ನ ಮುಖ್ಯಮಂತ್ರಿಗಳ ಗಮನಕ್ಕೆ ತಂದು ವಿಡಿಯೋ ತೋರಿಸಿದ್ದೇವೆ. ಆದ್ರೆ ನಮ್ಮ ಶಾಸಕರು ಅವರ ಬಲೆಗೆ ಬಿದ್ದಿಲ್ಲ ಎಂದು ಹೇಳಿದ್ದಾರೆ.