ಬೆಂಗಳೂರು - ಮನೆಯಿಂದ ದುಡಿ ಹಣ ಪಡೆಯಿರಿ. ಸ್ವ ಉದ್ಯೋಗ ಮಾಡಿ .ಹೀಗೆ ಎಲ್ಲರೂ ಪುಕ್ಕಟೆ ಪ್ರಚಾರ ನೀಡುತ್ತಲೇ ಇದ್ದಾರೆ. ಆದರೆ , ಹೇಗೆ ಅಂತಾ ಮಾತ್ರ ಯಾರಿಗೂ ತಿಳಿದಿಲ್ಲ.
ಸದ್ಯ ನಿಮ್ಮ ಮನೆಯಲ್ಲಿ ಟೇರೆಸ್ ಜಾಗ ಇದ್ದು , 10/10 ಜಾಗವಿದ್ದರೆ ಸಾಕು ನೀವು ಸ್ವ ಉದ್ಯೋಗ ಆಗಲು ಅವಕಾಶ ಇದೆ. ಹೌದು , ನಿಮ್ಮ ಮನೆಯ ಟೇರೆಸ್ನಲ್ಲಿ ಜೇನು ಸಾಗಾಣಿಕೆ ಮಾಡಬಹುದು.
ಇದಕ್ಕಾಗಿ ನೀವು 4 ರಿಂದ 12 ಸಾವಿರ ಖರ್ಚು ಮಾಡಬೇಕಾಗುತ್ತದೆ. ಸರ್ಕಾರದ ವತಿಯಿಂದ ಜಿಕೆವಿಕೆ ಕ್ಯಾಂಪೇಸ್ನಲ್ಲಿ ಜೇನು ಸಾಗಾಣಿಕೆ ಮಾಡಲು ರಾಜ್ಯದ ಯಾವ ಮೂಲೆಯಿಂದ ಬೇಕಾದರೂ ಬಂದು ಐಡಿಯಾ ತಗೊಬಹುದು.
ನೀವು 3 ಬಗೆಯ ಜೇನು ನೊಣಗಳನ್ನ ಸಾಕಲು ಯಾವುದೇ ತೊಂದರೆ ಆಗಲ್ಲ. ಆದರೆ ,ಇದಕ್ಕೂ ಕೆಲವೊಂದು ನಿಯಮಗಳಿವೆ. ಅದನ್ನ ಖರೀದಿ ವೇಳೆ ಜಿಕೆವಿಕೆ ಕ್ಯಾಂಪೇಸ್ನಲ್ಲಿ ಹೇಳಿ ಕೊಡಲಾಗುತ್ತದೆ. ಇನ್ನೂ ಜೇನು ನೊಣ ಸಾಗಾಣಿಕೆ ವೇಳೆ ಅಸುಪಾಸು 1 ಕಿಮೀ ಕ್ರಮಿಸಿ ತನಗೆ ಬೇಕಾದ ಹೂವುಗಳಿಂದ ಮಕರಂದ ಸೆಳೆದು ವಾಪಸು ಆಗುತ್ತದೆ. ಇದರಿಂದ ಸಾಗಾಣಿಕೆ ಮಾಡುವವರಿಗೆ ಯಾವುದೇ ತೊಂದರೆ ಆಗಲ್ಲ. ಕಾರಣ ಜೇನು ಸಾಗಾಣಿಕೆ ವೇಳೆಯೂ ಅಗತ್ಯ ಸಲಕರಣೆ ಜೊತೆಗೆ ಕೆಲವು ಹೂವಿನ ಗಿಡಗಳನ್ನ ಇಡಲು ಸೂಚಿಸುತ್ತಾರೆ.