ಈ ವರ್ಷ ದೇಶದಲ್ಲಿ ಕಳೆದ ವರ್ಷಕ್ಕಿಂತಲು ಶೇ.243 ಸೈಬರ್ ವಂಚನೆ ಹೆಚ್ಚಾಗಿದೆ. google,Amazon, facebook ಬಳಕೆದಾರರನ್ನೇ ಗುರಿಯಾಗಿಸಿಕೊಂಡಿರುವ ಸೈಬರ್ ವಂಚಕರು, ಪ್ರತಿಯೊಬ್ಬ ಬಳಕೆದಾರರ ಮೇಲೂ ಕಣ್ಣಿಟ್ಟಿದ್ದಾರೆ.
ಸೈಬರ್ ಸೆಕ್ಯೂರಿಟಿ ಸಂಸ್ಥೆಯವರು ಜನರಿಗೆ ಎಷ್ಟೇ ಜಾಗೃತಿ ಮೂಡಿಸಿದರೂ. ಸ್ಕ್ಯಾಮರ್ ಗಳು ಜನರನ್ನು ಮೋಸಗೊಳಿಸಲು ಅನೇಕ ವಿಧಾನಗಳನ್ನು ಬಳಸುತ್ತಾರೆ. ಇತ್ತಿಚಿಗೆ kaspersky ಪ್ರಕಟಿಸಿದ ವರದಿ ಪ್ರಕಾರ 2024 ರ ಮೊದಲ 6 ತಿಂಗಳಲ್ಲಿ scammers ಗಳು ಜನರ ಗೂಗಲ್ ಅಕೌಂಟ್ ಹ್ಯಾಕ್ ಮಾಡುವುದು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ.
ಆತಂಕಕಾರಿ ವಿಷಯ ಏನೆಂದರೆ ಒಬ್ಬರ ಗೂಗಲ್ ಅಕೌಂಟ್ ನ ಹ್ಯಾಕ್ ಮಾಡಿದರೆ, ಆ ವ್ಯಕ್ತಿಯ ಪ್ರತಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಈ ವರ್ಷ ಸೈಬರ್ ವಂಚಕರ ಟಾರ್ಗೆಟ್ ಆಗಿರುವುದೇ ಗೂಗಲ್. ಕಳೆದ 6 ತಿಂಗಳಿಂದ kaspersky 4 ಮಿಲಿಯನ್ ಹ್ಯಾಕರ್ಸ್ನ ತಡೆದಿದೆ.
ಅದೇ ಸಮಯದಲ್ಲಿ, ಫೇಸ್ಬುಕ್ ಬಳಕೆದಾರರ ಮೇಲೆ 37 ಲಕ್ಷ ಹ್ಯಾಕರ್ಸ್ ದಾಳಿ ಮಾಡಿದ್ದಾರೆ. ಇದಲ್ಲದೆ, ಅಮೆಜಾನ್ ನಲ್ಲಿ 3 ಮಿಲಿಯನ್ ದಾಳಿಗಳು ದಾಖಲಾಗಿವೆ. ಟಾಪ್ 10 ರಲ್ಲಿ ಮೈಕ್ರೋಸಾಫ್ಟ್, ಡಿಎಚ್ಎಲ್, PayPal, ಮಾಸ್ಟರ್ ಕಾರ್ಡ್, ಆ್ಯಪಲ್, ನೆಟ್ಫ್ಲಿಕ್ಸ್ ಮತ್ತು ಇನ್ಸ್ಟಾಗ್ರಾಮ್ ಸೇರಿವೆ ಎಂದು ಕ್ಯಾಸ್ಪರ್ಸ್ಕಿ ವರದಿ ಪ್ರಕಟಿಸಿದೆ.