ಕಲಬುರಗಿಯಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ, ಕಳವಾದ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿರುವ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಸಂಬಂಧ, ಕಾರ್ಯಾಚರಣೆಗಿಳಿದ ಪೊಲೀಸರು ಬಂಗಾರ, ಬೆಳ್ಳಿ, ನಗದು, ವಾಹನ ಮತ್ತು ಇತರೆ ವಸ್ತುಗಳ ಪತ್ತೆ ಹಚ್ಚಿ ಸಂಬಂಧಪಟ್ಟ ವಾರಸುದಾರರಿಗೆ ವಿತರಿಸಿದ್ದಾರೆ.
ಕಲಬುರಗಿಯ ಡಿಎಆರ್ ಪರೇಡ್ ಮೈದಾನದಲ್ಲಿ ಪ್ರಾಪರ್ಟಿ ಪರೇಡ್ ಹಮ್ಮಿಕೊಂಡು ಕಳ್ಳತನ ಪ್ರಕರಣಗಳ ಆರೋಪಿತರನ್ನು ಪತ್ತೆ ಮಾಡಿ, ಒಟ್ಟು 69 ಪ್ರಕರಣಗಳಲ್ಲಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈಗಾಗಲೇ 29 ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶದಂತೆ ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ನೀಡಲಾಗಿದೆ.
40 ಪ್ರಕರಣಗಳ 1.23 ಲಕ್ಷರೂ ನಗದು.239 ಗ್ರಾಂ ಬಂಗಾರದ ಒಡವೆಗಳು, 85 ಗ್ರಾಂ ಬೆಳ್ಳಿ ಒಡವೆಗಳು, 58ದ್ವಿಚಕ್ರ ವಾಹನಗಳು. 15ಮೋಬೈಲ್ ಫೋನ್ ಗಳು. 2ಮೋಟಾರ್ ಪಂಪ್ ಸೆಟ್, 1.ಬೊಲೆರೋ ಪಿಕ್ ಅಪ್, ಆಟೋರಿಕ್ಷಾ ಮತ್ತು ತೂಕದ ಮಶೀನ್ ವಾರಸುದಾರರಿಗೆ ನೀಡಲಾಯಿತು ಎಂದು ಎಸ್ ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ ಪಿ ಶ್ರೀನಿಧಿ, ಸೇರಿದಂತೆ ವಿವಿಧ ಪೋಲಿಸ್ ಠಾಣೆ ಸಿಪಿಐ, ಪಿಎಸ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.