ಗೋಲ್ಡ್ ಸ್ಕ್ಯಾಮ್ ಆರೋಪಿ ಐಶ್ವರ್ಯಾ ಗೌಡ ಮಾತನಾಡಿರುವ ಮತ್ತೊಂದು ಆಡಿಯೋ ವೈರಲ್ ಆಗಿದೆ. ನಗದು ಚಿನ್ನಾಭರಣ ಕೊಟ್ಟವರಿಗೆ ಐಶ್ವರ್ಯಗೌಡ ಫುಲ್ ಅವಾಜ್ ಹಾಕಿರುವ ಆಡಿಯೋ ಇದಾಗಿದೆ. ಆರ್. ಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದ ಶಿಲ್ಪಾ ಗೌಡಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಅದೇನು ಮಾಡ್ತ್ಯಾ ಮಾಡಿಬಿಡೇ ನೋಡೋಣ ಎಂದು ಅವಾಜ್ ಹಾಕಿದ್ದಾರೆ. ನೀನ್ ಇದೆ ಥರ ಅಲಿಬೇಕು. ಇಲ್ಲ ಇದ್ಯಾವ್ದಾದ್ರು ದೊಡ್ಡ ಲೆವೆಲ್ ಗೆ ಹೋಗಿ, ನಿನ್ನ ಮರ್ಯಾದೆ ಹೋಗಬೇಕು. ಇಲ್ಲ ನನ್ನ ಮರ್ಯಾದೆ ಹೋಗಬೇಕು ಅಷ್ಟೇ. ನಿಂದು ಹೋಗಬೇಕು. ನಂದು ಹೋಗಬೇಕು..ನಿನ್ನ ಮರ್ಯಾದೆ ಕಳಿಬೇಕು ಅಲ್ಲಿವರೆಗೂ ನನಗೆ ಸಮಾಧಾನ ಇಲ್ಲ. ನಾನ್ ಕೊಡೋದು ಇಲ್ಲ ಎಂದು ಹೇಳಿದ್ದಾರೆ.