ಬೆಂಗಳೂರು - ಬಡತನ ರೇಖೆಗಿಂತ ಕೆಳಗಿದ್ದು , ಆರ್ಥಿಕವಾಗಿ ಸಹಾಯ ಹಸ್ತದ ನಿರೀಕ್ಷೆಯಲ್ಲಿರುವ ಕುಟುಂಬಗಳಿಗೆ ಸರ್ಕಾರ ಬಿಪಿಎಲ್ ಕಾರ್ಡ್ ಮೂಲಕ ಸಹಾಯ ಹಸ್ತ ಚಾಚಿತು. ಈಗ ಅನರ್ಹರು ಸಹ ಬಿಪಿಎಲ್ ಕಾರ್ಡ್ ಪಡೆದು ಸರ್ಕಾರಕ್ಕೆ ತೀವ್ರ ಹೊರೆಯಾದ ಹಿನ್ನೆಲೆಯಲ್ಲಿ ಸದ್ಯ ಬಿಪಿಎಲ್ ಕಾರ್ಡ್ ರದ್ದಾಗುವ ಪ್ರಕ್ರಿಯೆ ಶುರುವಾಗಿದೆ. ಸದ್ಯ ರಾಜ್ಯದಲ್ಲಿ ಒಟ್ಟು 12497088 ಕಾರ್ಡ್ನ ಎಪಿಎಲ್ ಹಾಗೂ ಬಿಪಿಎಲ್ ಕಾರ್ಡ್ ಫಲಾನುಭವಿಗಳಿದ್ದಾರೆ. ಈ ಮಧ್ಯೆ ಸದ್ಯ 68071 ಕಾರ್ಡ್ ರದ್ದು ಮಾಡಲಾಗಿದೆ. ಇನ್ನೂ ಪರಿಶೀಲನೆ ಹಂತದಲ್ಲಿ 17710 ಇದೆ.
ಸದ್ಯ ಅನರ್ಹ ಫಲಾನುಭವಿಗಳನ್ನ ತೆಗೆದು ಹಾಕುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಯೋಚಿಸಿರುವ ಸರ್ಕಾರ ಹಂತ ಹಂತವಾಗಿ ಎಲ್ಲ ಕಾರ್ಡ್ಗಳನ್ನ ಪರಿಶೀಲಿಸಿ ಮತ್ತೆ ಅರ್ಹರಿಗೆ ಮಾತ್ರ ಕಾರ್ಡ್ ವಿತರಿಸಲಿದೆ ಎಂದು ಮಾಹಿತಿ ನೀಡಿದೆ.
ಈ ಬಿಪಿಎಲ್ ಕಾರ್ಡ್ನಿಂದ ಒಬ್ಬರಿಗೆ 7 ಕೆ.ಜಿ. ಉಚಿತ ಅಕ್ಕಿ ನೀಡಲಾಗುತ್ತದೆ. ಕಾರ್ಡ್ನಲ್ಲಿರುವ ಕುಟುಂಬ ಸದಸ್ಯರನ್ನ ಲೆಕ್ಕ ಹಾಕಿ ತಲಾ 7 ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಹೀಗಾಗಿ ಸದ್ಯ ರಾಜ್ಯಾದ್ಯಂತ ಕಾರ್ಡ್ ರದ್ದತಿ ದೊಡ್ಡ ಕೋಲಾಹಲಾ ಸೃಷ್ಟಿ ಮಾಡಿತು.