ವೈರಲ್

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ !

ಬೆಂಗಳೂರಿನ ಟ್ರಾಫಿಕ್‌ಗೆ ದೊಡ್ಡ ವರದಾನವಾದ ನಮ್ಮ ಮೆಟ್ರೋ ರೈಲಿನಿಂದ ಮತ್ತೊಂದು ಗುಡ್‌ ನ್ಯೂಸ್‌ ಹೊರಬಿದ್ದಿದೆ.

ಬೆಂಗಳೂರು - ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌ ಹೊರಬಿದ್ದಿದೆ. ನಗರದಲ್ಲಿ ಟ್ರಾಫಿಕ್‌ ಸಮಸ್ಯೆ ಹೆಚ್ಚಾಗಿದು , ವಾಹನ ಸವಾರರಿಗೆ ಕೊಂಚ ರಿಲ್ಯಾಕ್ಸ್‌ ಸಿಗಲಿ ಎಂದು ನಮ್ಮ ಮೆಟ್ರೋ ರೈಲುಗಳ ಸೇವೆಯನ್ನೇ ವಿಸ್ತರಿಸಿದೆ. 

ಹೌದು , ಜನವರಿ ಮೊದಲ ವಾರದಲ್ಲಿ ೨೧ ಹೊಸ ರೈಲುಗಳು ನಮ್ಮ ಮೆಟ್ರೋಗೆ ಹೊಸದಾಗಿ ಸೇ‍ರ್ಪಡೆಯಾಗಲಿದೆ. ಈ ಪ್ರಕಾರ ಇನ್ನ್ಮುಂದೆ ನಮ್ಮ ಮೆಟ್ರೋ ರೈಲುಗಳು ಪ್ರತಿ ೩ ನಿಮಿಷಕ್ಕೊಮ್ಮೆ ಸಂಚಾರ ಮಾಡಲಿದೆ.

ನಗರದಲ್ಲಿ ಬರೋಬ್ಬರಿ ೭೬ ಕಿ.ಮೀ. ವರೆಗೂ ಮೆಟ್ರೋ ಸೇವೆ ನೀಡುತ್ತಿದೆ. ಇಡೀ ಮಾರ್ಗದಲ್ಲಿ ಮಾದವಾರದಿಂದ ಸಿಲ್ಕ್‌ ಬೋರ್ಡ್‌ ಹಾಗೂ ನೇರಳೆ ಮಾರ್ಗದಲ್ಲಿ ಚಲಘಟ್ಟದಿಂದ ವೈಟ್‌ಫೀಲ್ಡ್‌ವರೆಗೆ ಪ್ರತಿನಿತ್ಯ ಕನಿಷ್ಠ ೭ ಲಕ್ಷ ಪ್ರಯಾಣಿಕರು ಮೆಟ್ರೋವನ್ನ ಪೀಕ್‌ ಟೈಮ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಸದ್ಯಕ್ಕಂತೂ ೫೭ ಮೆಟ್ರೋ ರೈಲುಗಳು ಸಂಚರಿಸುತ್ತಿದೆ. ಇದರಲ್ಲಿ ೫೫ ನಿತ್ಯ ಸಂಚರಿಸಿ, ೨ ತುರ್ತು ಸೇವೆಗಾಗಿ ರೈಲುಗಳು ಕಾಯ್ದಿರಿಸಲಾಗಿದೆ. ಒಪ್ಪಂದ ಸಂದರ್ಭದಲ್ಲಿ ೭೮ ರೈಲುಗಳನ್ನ ಒದಗಿಸುವಂತೆ ಒಪ್ಪಂದವಾಗಿದೆ.