ತುಮಕೂರು : ಮಳೆಯಿಂದ ಸರ್ಕಾರಿ ಶಾಲಾ ಮೈದಾನಯೊಂದು ಜಲಾವೃತವಾಗಿದ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ ಸರ್ಕಾರಿ ಶಾಲೆಯಲ್ಲಿ ನೆಡೆದಿದೆ. ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಶಾಲಾ ಮೈದಾನ ಜಲಾವೃತಗೊಂಡಿದೆ.

ಮೈದಾನದಿಂದ ಸರಾಗವಾಗಿ ನೀರು ಹರಿದುಹೋಗಲು ವ್ಯವಸ್ಥೆ ಇರದ ಕಾರಣ ಮಕ್ಕಳು ಪರದಾಡುವಂತಾಗಿದೆ. ನೀರು ಸರಾಗವಾಗಿ ಹರಿದು ಹೊಗಲು ಚರಂಡಿ ವ್ಯವಸ್ಥೆ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
