ಕರ್ನಾಟಕ

ಸರ್ಕಾರಿ ಕೆಲಸ ದೇವರ ಕೆಲಸ ಅಲ್ಲ.. ದೆವ್ವಗಳ ಕೆಲಸ ಎನ್ನುವಂತಾಗಿದೆ; ಆರ್.‌ ಅಶೋಕ್

​ವಿಧಾನ ಸೌಧ ಮೌನ ಸೌಧವಾಗಿದೆ. ನಿಷ್ಟಾವಂತ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದೆ ಎಂದು, ವಿಪಕ್ಷ ನಾಯಕ ಆರ್. ಅಶೋಕ್‌ ಹೇಳಿಕೆ ನೀಡಿದ್ದಾರೆ.

ವಿಧಾನ ಸೌಧ ಮೌನ ಸೌಧವಾಗಿದೆ. ನಿಷ್ಟಾವಂತ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದೆ ಎಂದು, ವಿಪಕ್ಷ ನಾಯಕ ಆರ್. ಅಶೋಕ್‌ ಹೇಳಿಕೆ ನೀಡಿದ್ದಾರೆ. ಸರ್ಕಾರಿ ಕೆಲಸ ದೇವರ ಕೆಲಸ ಅಲ್ಲ. ದೆವ್ವಗಳ ಕೆಲಸ ಎನ್ನುವಂತಾಗಿದೆ. ಕಾಂಗ್ರೆಸ್ ಬಂದ ಮೇಲೆ ಸರ್ಕಾರಿ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಈ ಸರ್ಕಾರದಲ್ಲಿ  ಮಹಿಳಾ ಅಧಿಕಾರಿಗಳು ಹೇಗೆ ಕೆಲಸ ಮಾಡಬೇಕು. ಮಹಿಳಾ ಅಧಿಕಾರಿಗಳಿಗೆ ಇಲ್ಲಿ ರಕ್ಷಣೆಯೇ ಇಲ್ಲ. ಮೈಸೂರಿನಲ್ಲಿ ಪೊಲೀಸ್‌ ಠಾಣೆಗೆ ಕಲ್ಲು ತೂರಾಟ ಮಾಡಲಾಗಿದೆ. 

ಒಬ್ಬ ಸಚಿವ ಕೃತ್ಯ ಎಸಗಿದವರನ್ನು ಸಣ್ಣ ಹುಡುಗರು ಅಂತಾರೆ, ಬಾಂಬ್‌ ಬ್ಲಾಸ್ಟ್‌ ಆಗಿದ್ದಾಗ ಅವರು ಬ್ರದರ್ಸ್‌ ಆಗಿದ್ದರು. ಮಾಫಿಯಾದ ಕೈಯಲ್ಲಿ ಸಿಲುಕಿ ಈ ಸರ್ಕಾರ ಕಳೆದು ಹೋಗಿದೆ..ಅಧಿಕಾರಿಗಳ ಪಾಡು ಹೇಳತೀರದು. ಕೆಲಸ ಮಾಡೋ ಬದಲು ಆತ್ಮ ಹತ್ಯೆ, ಬೆದರಿಕೆ ನಡೆಯುತ್ತಿದೆ. ಸಿ.ಟಿ ರವಿ ಅವರ ವಿಚಾರದಲ್ಲಿ ಸರ್ಕಾರ ತೋರುವ ಕಾನೂನು ಪ್ರದರ್ಶನ ಈ ಪ್ರಕರಣಗಳಲ್ಲಿ ಯಾಕೆ ಇಲ್ಲ ಎಂದು ಪ್ರಶ್ನಿಸಿದ್ದು, ಈ ಸರ್ಕಾರದ ಭಾಗವಾಗಿರೋ ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ