ಬಿಗ್‌ಬಾಸ್ ಮನೆಯಲ್ಲಿ ಆಟ ಮುಗಿತಲ್ಲ ಅನ್ನೋ ದುಃಖ ಕಣ್ಣೀರಾಗಿ ಹರಿದಿದೆ.. ನಾನು ಏನು ಅಂತಾ ತೋರಿಸ್ತೇನೆ ಅಂತಾ ಬಂದವರು ಇದೀಗ ಬಿಗ್‌ಬಾಸ್ ಮನೆಯ ಡೋರ್ ಹತ್ತಿರ ನಿಂತಿದ್ದಾರೆ.. ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ದೊಡ್ಮನೆ ಖಾಲಿ ಮಾಡೋದು ಯಾರು ಅನ್ನೋ ಸಸ್ಪೆನ್ಸ್‌ಗೆ ಬಹುತೇಕ ಉತ್ತರ ಸಿಕ್ಕಿದೆ.. ಪಾಸಿಟಿವ್ ಗೌತಮಿ ಎಂದೇ ಫೇಮಸ್ ಆಗಿರುವ ನಟಿ ಗೌತಮಿ ಇದೀಗ ಬಿಗ್‌ಬಾಸ್ ಮನೆ ಖಾಲಿ ಮಾಡೋದು ಬಹುತೇಕ ಫಿಕ್ಸ್ ಆಗಿದೆ ಎನ್ನಲಾಗ್ತಿದೆ.. ಮಿಡ್‌ನೈಟ್‌ನಲ್ಲೇ ಬಿಗ್‌ಬಾಸ್ ಮನೆಯ ಡೋರ್ ಓಪನ್ ಆಗಿದ್ದು, ಕಣ್ಣುಗಳಲ್ಲಿ ನೀರು ತುಂಬಿಕೊಂಡು ಗೌತಮಿ ನಿಂತಿದ್ದಾರೆ.. ಬಿಗ್‌ಬಾಸ್ ಮೂಲಗಳ ಪ್ರಕಾರ ಗೌತಮಿಯೇ ಔಟ್ ಎನ್ನಲಾಗ್ತಿದೆ..
ಹೌದು.. ಇನ್ನೇನು ಎರಡೇ ವಾರಗಳಲ್ಲಿ ಬಿಗ್‌ಬಾಸ್ ಸೀಸನ್ 11 ಮುಕ್ತಾಯವಾಗಲಿದೆ.. 8 ಸ್ಪರ್ಧಿಗಳಲ್ಲಿ ಬಿಗ್‌ಬಾಸ್ ಗೆಲ್ಲೋದ್ ಯಾರು ಅನ್ನೋ ಕುತೂಹಲ ಹೆಚ್ಚಾಗಿದೆ.. ಪ್ರಬಲ ಕಂಟೆಂಸ್ಟ್‌ಗಳ ಮಧ್ಯೆಯೇ ಫೈಟ್ ಜೋರಾಗಿದೆ.. ಈ ಮಧ್ಯೆ ಹನುಮಂತು, ಧನರಾಜ್ ಬಿಟ್ಟು ಎಲ್ಲಾ ಸ್ಪರ್ಧಿಗಳು ನಾಮಿನೇಟ್ ಆಗಿದ್ದಾರೆ.. ಅದರಲ್ಲಿಯೂ ಈಗಾಗಲೇ ಮಿಡ್‌ವೀಕ್ ಎಲಿಮಿನೇಷನ್ ಇರುತ್ತೆ ಅಂತಾ ಹೇಳಿರೋದ್ರಿಂದ ಓರ್ವ ಸ್ಪರ್ಧಿ ಗಂಟು-ಮೂಟೆ ಕಟ್ಟಬೇಕಿದೆ.. ಹೀಗಾಗಿ ಇಂದು ಓರ್ವ ಕಂಟೆಸ್ಟಂಟ್ ಮನೆಯಿಂದ ಜಾಗ ಖಾಲಿ ಮಾಡ್ಬೇಕಿದ್ದು, ಗೌತಮಿಯೇ ಮನೆಯಿಂದ ಆಚೆ ಹೋಗಿದ್ದಾರೆ..
ಬಿಗ್‌ಬಾಸ್‌ನ ಇಂದಿನ ಮಿಡ್‌ವೀಕ್ ಎಲಿಮಿನೇಷನ್ ಪ್ರೋಮೋ ಹೊರಬಿದ್ದಿದೆ.. ಮಧ್ಯರಾತ್ರಿಯೇ ಬಿಗ್‌ಬಾಸ್ ಮನೆಯಲ್ಲಿ ಸೈರನ್ ಕೂಗಿದೆ.. ಮಲಗಿದ್ದ ಎಲ್ಲಾ ಸ್ಪರ್ಧಿಗಳು ಎದ್ದು ಕೂರವಂತೆ ಮಾಡಿದೆ.. ಇಷ್ಟಕ್ಕೆ ಮುಗಿದಿಲ್ಲ.. ಲಗೇಜ್ ಕೂಡ ಪ್ಯಾಕ್ ಆಗಿದ್ದು ಸ್ಪರ್ಧಿಗಳು ಬಿಗ್‌ಬಾಸ್ ಮನೆಯ ಡೋರ್ ಹತ್ತಿರ ಬಂದು ನಿಂತಿದ್ದಾರೆ.. ಕೊನೆ ಕ್ಷಣದಲ್ಲೂ ಸ್ಪರ್ಧಿಗಳ ಮಧ್ಯೆಯೇ ಮತ್ತೊಂದು ಟಾಸ್ಕ್ ನಡೆದಿದೆ.. ಯಾರು ಮನೆಯಿಂದ ಹೊರಬೇಕು ಅಂತಾ ಸ್ಪರ್ಧಿಗಳೇ ಹೆಸರು ಸೂಚಿಸಬೇಕಿದೆ.. ನಾಮಿನೇಟ್ ಆಗಿರುವ ಸ್ಪರ್ಧಿಗಳ ಫೋಟೋವನ್ನ ರೀಸನ್ ಕೊಟ್ಟು, ನೀರಿಗೆ ಹಾಕಬೇಕಿದೆ.. ಒಬ್ಬೊಬ್ಬರು ಸ್ಪರ್ಧಿಗಳು, ಎಲಿಮಿನೇಷನ್‌ಗೆ ರೀಸನ್ ಕೊಟ್ಟು ಎದುರಾಳಿ ಫೋಟೋವನ್ನ ಸ್ವಿಮ್ಮಿಂಗ್‌ಪೂಲ್‌ಗೆ ಹಾಕಿದ್ದಾರೆ.. ಮಿಡ್‌ವೀಕ್ ಎಲಿಮಿನೇಷನ್‌ನಲ್ಲಿ ಗೌತಮಿಯ ಬಿಗ್‌ಬಾಸ್ ಆಟ ಮುಗಿದಿದೆ ಎನ್ನಲಾಗ್ತಿದೆ..