ಮಹಿಳೆಯರ ಐಸಿಸಿ ಚಾಂಪಿಯನ್ಶಿಪ್ ಟೂರ್ನಿಯ 3ನೇ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಭಾರತದ ಮಹಿಳಾ ತಂಡ ಗೆದ್ದುಬೀಗಿದೆ.. ರಾಜ್ಕೋಟ್ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಐರ್ಲೆಂಡ್ ವಿರುದ್ಧ ನಡೆದ ಪಂದ್ಯದಲ್ಲಿ ಟೀಮ್ ಇಂಡಿಯಾ ಹಂಗಾಮಿ ನಾಯಕಿ ಸ್ಮೃತಿ ಮಂದಾನ, ಪ್ರತೀಕಾ ರಾವಲ್ ಅವರ ಶತಕಗಳ ನೆರವಿನಿಂದ 435 ರನ್ ಗಳಿಸಿ ದಾಖಲೆ ಬರೆದಿತ್ತು.. ಕೇವಲ 70 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಸ್ಮೃತಿ ಮಂದಾನ (135) ದಾಖಲೆ ಬರೆದಿದ್ದಾರೆ.. ಸ್ಮೃತಿ ಮಂದಾನ ಒಟ್ಟಾರೆ 80 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್ ಸಮೇತ 135 ರನ್ಗಳನ್ನು ಬಾರಿಸಿದ್ದಾರೆ.. ನಾಯಕಿಗೆ ಸಾಥ್ ನೀಡಿದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ 20 ಬೌಂಡರಿ ಮತ್ತು 1 ಸಿಕ್ಸರ್ ಮೂಲಕ 154 ರನ್ ಗಳಿಸಿ ಮಿಂಚಿದ್ದಾರೆ.. ಇಬ್ಬರ ಆರ್ಭಟ ಬ್ಯಾಟಿಂಗ್ ಮೂಲಕ ಭಾರತ ತಂಡ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 435 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು.. ಬೃಹತ್ ಗುರಿ ಬೆನ್ನಟ್ಟಲು ವಿಫಲವಾದ ಐರ್ಲೆಂಡ್ ತಂಡವು ಕೇವಲ 131 ರನ್ ಗಳಿಗೆ ಆಲೌಟ್ ಆಗಿ ಪರಾಭವಗೊಂಡಿದೆ..