ದೇಶ

ಭಾರತೀಯ ನೌಕಾಪಡೆ ಸೇರಿದ ಮೂರು ಮಹಾ ಅಸ್ತ್ರ.. ಚೀನಾ, ಪಾಕ್‌ಗೆ ಢವಢವ..!

ಭಾರತದ ರಕ್ಷಣಾ ಪಡೆಗಳ ಸಾಮರ್ಥ್ಯದ ಅರಿವು ಯಾರಿಗಿಲ್ಲ ಹೇಳಿ..? ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ ತಾಕತ್ತನ್ನ ಜಗತ್ತೇ ಅರಿತಿದೆ..

ಭಾರತದ ರಕ್ಷಣಾ ಪಡೆಗಳ ಸಾಮರ್ಥ್ಯದ ಅರಿವು ಯಾರಿಗಿಲ್ಲ ಹೇಳಿ..? ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆ ತಾಕತ್ತನ್ನ ಜಗತ್ತೇ ಅರಿತಿದೆ.. ರಕ್ಷಣಾ ವಲಯದ ಭಾರತದ ಶಕ್ತಿ-ಸಾಮರ್ಥ್ಯ ಕಂಡು ಶತ್ರುರಾಷ್ಟ್ರಗಳ ಪತರುಗುಟ್ಟುತ್ತವೇ.. ಹೀಗಿರುವಾಗಲೇ ಇದೀಗ ಭಾರತೀಯ ಸೇನೆಯ ಬತ್ತಳಿಕೆಗೆ ಮತ್ತೆ ಮೂರು ಮಹಾ ಅಸ್ತ್ರಗಳು ಸೇರ್ಪಡೆಯಾಗಿವೆ.. ಪ್ರಧಾನಿ ನರೇಂದ್ರ ಮೋದಿ,, ಮುಂಬೈನ ನೇವಲ್ ಡಾಕ್ ಯಾರ್ಡ್‌ನಲ್ಲಿ ಭಾರತೀಯ ನೌಕಾಪಡೆಗೆ 3 ಪ್ರಮುಖ ಯುದ್ಧನೌಕೆಗಳನ್ನು ದೇಶಕ್ಕೆ ಸಮರ್ಪಿಸಿದ್ದಾರೆ.. ಐಎನ್‌ಎಸ್ ಸೂರತ್, ಐಎನ್‌ಎಸ್ ನೀಲಗಿರಿ ಮತ್ತು ಐಎನ್‌ಎಸ್ ವಾಘಶೀರ್ ಭಾರತದ ಕಡಲ ಭದ್ರತೆಯನ್ನು ಮತ್ತಷ್ಟು ಬಲಪಡಿಸಿವೆ..

ನಿಮಗೆ ಗೊತ್ತಿರಲಿ.. ಸ್ವಲ್ಪ ಮೈಮರೆತರೆ ಸಾಕು ಭಾರತದ ಮೇಲೆ ಎರಗಲು ಶತ್ರು ರಾಷ್ಟ್ರಗಳು ಕಾದು ಕೂತಿವೆ.. ನೆರೆಯ ಪಾಪಿ ಪಾಕಿಸ್ತಾನದಿಂದ ಹಿಡಿದು ನರಿಬುದ್ಧಿಯ ಚೀನಾ, ಭಾರತದ ಜೊತೆ ಒಂದಲ್ಲ.. ಒಂದು ಕ್ಯಾತೆ ತೆಗೆಯುತ್ತಲೇ ಇರುತ್ತವೇ.. ಇಷ್ಟೇ ಅಲ್ಲ ತಮ್ಮ ಕೈಯಲ್ಲಿ ಏನೂ ಮಾಡೋಕೆ ಆಗದಿದ್ರೂ ಪಾಕಿಸ್ತಾನ, ಚೀನಾ ಕುಮ್ಮಕ್ಕಿನಿಂದ ಮ್ಯಾನ್ಮಾರ್, ಬಾಂಗ್ಲಾದೇಶ, ‍ಶ್ರೀಲಂಕಾ, ಅಫ್ಘಾನಿಸ್ತಾನ ಕೂಡ ಭಾರತದ ಜೊತೆ ಕಿತ್ತಾಡ್ತಾನೇ ಇರುತ್ತೆ.. ಗಡಿ ಸೇರಿ ಹಲವು ವಿಚಾರಗಳಲ್ಲಿ ಕಿರಿಕ್‌ ಆಗುತ್ತಲೇ ಇರುತ್ತೆ.. ತಂಟೆಗೆ ಬಂದ ದೇಶಗಳಿಗೆ ಭಾರತ ಕೂಡ ಸರಿಯಾಗಿಯೇ ತಿರುಗೇಟು ಕೊಟ್ಟು ಕಳುಹಿಸುತ್ತೆ.. ಶತ್ರು ರಾಷ್ಟ್ರಗಳ ಕುತಂತ್ರವನ್ನ ಮಟ್ಟ ಹಾಕೋಕೆ ಭಾರತ ಸರ್ಕಾರ, ಸಮಯಕ್ಕೆ ತಕ್ಕಂತೆ ಸೇನೆಗೆ ಬಲ ತುಂಬುತ್ತಿದೆ.. ಇದೀಗ ನೌಕಾಪಡೆಗೆ ಮೂರು ಯುದ್ಧನೌಕೆಗಳನ್ನ ಪ್ರಧಾನಿ ನರೇಂದ್ರ ಮೋದಿ ಸಮರ್ಪಿಸಿದ್ದಾರೆ..

ಹೌದು.. ಭಾರತೀಯ ನೌಕಾಪಡೆಗೆ ಮೂರು ಅತ್ಯಾಧುನಿಕ ಯುದ್ಧನೌಕೆಗಳು  ಸೇರ್ಪಡೆಗೊಂಡಿವೆ. .ಇನ್ನುಮುಂದೆ ಶತ್ರುಗಳು ಭಾರತವನ್ನ ಕೆಣಕುವಾಗ ಒಂದಲ್ಲ ಹತ್ತು ಬಾರಿ ಯೋಚಿಸಬೇಕಾಗುತ್ತೆ.. ಏಕೆಂದರೆ INS ಸೂರತ್, INS ನೀಲಗಿರಿ ಮತ್ತು INS ವಾಘ್‌ಶೀರ್ ಇನ್ಮುಂದೆ ಸಮುದ್ರಕ್ಕೆ ಇಳಿಯಲಿದೆ.. 

ಮಹಾ ಅಸ್ತ್ರಗಳು ಪೈಕಿ ಮೊದಲನೇದಾಗಿ INS ಸೂರತ್ P-15B ಹೇಗಿದೆ ಅಂತಾ ನೋಡೋದ್‌ ಆದ್ರೆ.. ಇದು ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಆಧುನಿಕ ನೆಟ್‌ವರ್ಕಿಂಗ್‌ ವ್ಯವಸ್ಥೆ ಹೊಂದಿದೆ.. ಅಷ್ಟೇ ಅಲ್ಲ.. ಸುಧಾರಿತ ರಡಾರ್ ವ್ಯವಸ್ಥೆ ಇದರಲ್ಲಿದ್ದು, ಅದು ಶತ್ರುಗಳ ಮೇಲೆ ರಹಸ್ಯವಾಗಿ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.. ಕ್ಷಿಪಣಿಗಳಿಂದ ಹಿಡಿದು ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು ಇದರಲ್ಲಿವೆ.. ಮತ್ತೊಂದೆಡೆ INS ನೀಲಗಿರಿ P-17A ಶತ್ರುಗಳ ಎದೆನಡುಗಿಸುವಂತಿದೆ.. ಇದು ಬ್ರಹ್ಮೋಸ್ ಸೂಪರ್‌ಸಾನಿಕ್‌ ಕ್ಷಿಪಣಿ ಸೇರಿದಂತೆ ಸುಧಾರಿತ ಶಸ್ತ್ರಾಸ್ತ್ರಗಳು ಮತ್ತು ಆಧುನಿಕ ವ್ಯವಸ್ಥೆಗಳನ್ನು ಹೊಂದಿದೆ.. ನೌಕಾಪಡೆ ಸೇರ್ಪಡೆಯಾಗಿರುವ INS ವಾಘಶೀರ್‌ ಅನ್ನು ಫ್ರಾನ್ಸ್‌ನ ನೇವಲ್ ಗ್ರೂಪ್‌ನ ಸಹಯೋಗದೊಂದಿಗೆ ನಿರ್ಮಿಸಲಾಗಿದೆ, ಇದೊಂದು ಜಲಾಂತರ್ಗಾಮಿ ನೌಕೆಯಾಗಿದ್ದು, ಭಾರತದ ಶಕ್ತಿಯನ್ನ ಪ್ರತಿಬಿಂಬಿಸುತ್ತಿದೆ.. 

ಸಾಗರ ಮಾರ್ಗದಲ್ಲಿ ಜಾಗತಿಕ ನಾಯಕನಾಗಬೇಕು ಎಂಬ ಭಾರತದ ದೂರದೃಷ್ಟಿಗೆ ಈ  ಪ್ರಮುಖ ಯುದ್ಧ ನೌಕೆಗಳು ಪ್ರಮುಖ ಅಸ್ತ್ರವಾಗಿವೆ.. ಕಾಲುಕೆರೆದು ಜಗಳಕ್ಕೆ ನಿಲ್ಲುವ ಪಾಕಿಸ್ತಾನ, ಚೀನಾ ಸೇರಿ ಹಲವು ರಾಷ್ಟ್ರಗಳಿಗೆ ಭಾರತದ ಶಕ್ತಿ ನಿದ್ದೆಗೆಡಿಸಿದೆ..