ಕಲಬುರಗಿ : ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ವಿಶ್ವನಾಥ್ ಜಾಮದಾರ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದ ಕೊಲೆ ಆರೋಪಿಯ ಲಕ್ಷ್ಮಣ್ ನ ಮೇಲೆ ಪೊಲೀಸರು ಫೈರಿಂಗ್ ನಡೆಸಿರುವ ಘಟನೆಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ನಡೆದಿದೆ ಎಂದು ತಿಳಿದು ಬಂದಿಂದೆ. ಕೊಲೆ ಆರೋಪಿ ಲಕ್ಷ್ಮಣ್ ಕಾಲಿಗೆ ಅಫಜಲಪುರ ಠಾಣೆ ಪಿಎಸ್ ಐ ಸೋಮಲಿಂಗ ಒಡೆಯರ್ ಗುಂಡೇಟು ಹೊಡೆದಿದ್ದು, ಆತನ ಬಳಿ ಇದ್ದ ಗನ್ ವಶಕ್ಕೆ ಪಡೆಯಲಾಗಿದ.
ಹೌದು , ಆರೋಪಿ ಲಕ್ಷ್ಮಣ್ ನನ್ನು ಕರೆದುಕೊಂಡು ಪೊಲೀಸರು ಮಡ್ಯಾಳ ಗ್ರಾಮಕ್ಕೆ ತೆರಳಿದ್ದರು. ಈ ವೇಳೆ ಆತ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಪಿಎಸ್ ಐ ಸೋಮಲಿಂಗ ಆತ್ಮರಕ್ಷಣೆಗಾಗಿ ಆರೋಪಿಯ ಬಲಗಾಲಿಗೆ ಗುಂಡೇಟು ಹೊಡೆದಿದ್ದಾರೆ. ಆರೋಪಿ ಲಕ್ಷ್ಮಣ್ ಬೆಂಗಳೂರು ಹಾಗೂ ಕಲಬುರಗಿ ಸೇರಿದಂತೆ ವಿವಿಧೆಡೆ ಬಂದೂಕು ಸರಬರಾಜು ಮಾಡುತ್ತಿದ್ದ. ಅಕ್ರಮ ಶಸ್ತ್ರಾಸ್ತ್ರ ಪೂರೈಕೆ, ಈ ಸಂಬಂಧ ಕೊಲೆಸೇರಿದಂತೆ ಆರೋಪಿ ವಿರುದ್ಧ 11 ಕೇಸ್ ಗಳಿದ್ದು, ಆಳಂದ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯಿತಿ ಸದಸ್ಯನ ಕೊಲೆ ಪ್ರಕರಣ : ಆರೋಪಿ ಕಾಲಿಗೆ ಗುಂಡೇಟು