ಮಂಡ್ಯ: ಮಂಡ್ಯದಲ್ಲಿ CEN ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಜಿಲ್ಲೆಯಾದ್ಯಂತ ಕಳೆದ ಮೂರು ತಿಂಗಳ ಅವಧಿಯಲ್ಲಿ ಕಳ್ಳತನ ಆಗಿದ್ದ ನೂರಾರು ಮೊಬೈಲ್ ಗಳನ್ನ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿದ್ದಾರೆ. ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್ ಕಳ್ಳತನವಾಗಿದ್ದವು ಈ ಬಗ್ಗೆ ಸಾರ್ವಜನಿಕರು ದೂರು ದಾಖಲಿಸಿದ್ರು. ಸಾರ್ವಜನಿಕರ ದೂರಿನನ್ವಯ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ಮೂಲಕ ಮೊಬೈಲ್ ಗಳನ್ನ ಪತ್ತೆ ಹಚ್ಚಿದ್ದಾರೆ. ಸುಮಾರು 18 ಲಕ್ಷ ಮೌಲ್ಯದ ಡಿಫ್‌ರೆಂಟ್ ಮಾಡೆಲ್‌ಗಳ 100 ಮೊಬೈಲ್ ಫೋನ್ ಪತ್ತೆ ಹಚ್ಚಿದ್ದಾರೆ.
ಇನ್ನು ಮೊಬೈಲ್ ಪತ್ತೆ ಕಾರ್ಯಾಚರಣೆಗೆ ಎಎಸ್ಪಿ ಇ.ಸಿ.ತಿಮ್ಮಯ್ಯ ಮಾರ್ಗದರ್ಶನದಲ್ಲಿ CEN ಡಿಎಸ್ಪಿ ಶಿವಮೂರ್ತಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಗಿರೀಶ್, ಸುಮನ್, ಬಸವರಾಜು ಎಂಬುವವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಕಳವು ಆಗಿದ್ದ ನೂರಾರು ಮೊಬೈಲ್ ಫೋನ್ ಗಳನ್ನ CEIR ಪೋರ್ಟಲ್ ಮೂಲಕ ಪತ್ತೆ ಹಚ್ಚಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇನ್ನು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸಮ್ಮುಖದಲ್ಲಿ ಮೊಬೈಲ್ ಮಾಲೀಕರಿಗೆ ಫೋನ್‌ಗಳನ್ನ ವಿತರಿಸಿದ್ದಾರೆ.