ಮುಡಾ ಭ್ರಷ್ಟಾಚಾರದಲ್ಲಿ ಜಿ.ಟಿ.ದೇವೇಗೌಡರ ಪಾತ್ರ ಇದೆ ಎಂಬ ಯತ್ನಾಳ್ ಹೇಳಿಕೆ ವಿರುದ್ಧ, ಶಾಸಕ ಜಿಟಿಡಿ ಕೆಂಡಾಮಂಡಲವಾಗಿದ್ದಾರೆ. ಮೈಸೂರಿನಲ್ಲಿ ಯತ್ನಾಳ್ ವಿರುದ್ಧ ಏಕವಚನದಲ್ಲೇ ಗುಡುಗಿದ ಜಿಟಿಡಿ, ನಿನಗೇನು ಗೊತ್ತು ನನ್ನ ಯೋಗ್ಯತೆ. ನನ್ನ ಆಸ್ತಿ ಲೆಕ್ಕ, ನನ್ನ ಸಾಲ ಎಷ್ಟಿದೆ ಎಂದು ಗೊತ್ತಿದ್ಯಾ. ನಿನಗೆ ತಾಕತ್ ಇದ್ರೆ ನಿನ್ನ ಬಳಿ ನನ್ನದೇನಿದೆ ಬಹಿರಂಗಪಡಿಸು ಎಂದಿದ್ದಾರೆ. ನಾನು ಶಾಸಕನಾಗಿ ಬಂದಾಗ ಇದ್ದ ಆಸ್ತಿಗೂ ಇವತ್ತಿನ ಆಸ್ತಿಗೂ ಏನಿದೆ ಎಂಬುದು ನೀನು ತೆಗಿ.ನೀನು ರಾಜಕೀಯಕ್ಕೆ ಬಂದಾಗ ಏನಿತ್ತು ನಂತರ ನೀನು ಹೇಗೆ ದುಂಡಗಾದೆ. ಸೌಹಾರ್ಧ ಬ್ಯಾಂಕಿನ ಹೆಸರಿನಲ್ಲಿ ಎಷ್ಟು ಹಣ ಡೆಪಾಸಿಟ್ ಮಾಡಿಸಿಕೊಂಡು ಅದನ್ನ ಎಲ್ಲೆಲ್ಲಿ ಹೂಡಿಕೆ ಮಾಡಿದ್ಯಾ ಎಂಬುದು ನನಗೆ ಗೊತ್ತಿಲ್ವ. ಎಲ್ಲದನ್ನೂ ತೆಗೆಯಬೇಕಾ ನಾನು.ಬೇರೆಯವರಿಗೆ ಮಾತನಾಡದ ರೀತಿ ನನ್ನ ಜೊತೆ ಮಾತನಾಡಬೇಡ.ಇದು ನಾನು ನಿನಗೆ ಹಾಕುತ್ತಿರುವ ಸವಾಲ್. ನನ್ನ ಬಗ್ಗೆ ಮಾತನಾಡುವಾಗ ಎಚ್ಚರಕೆ ಇರಲಿ. ನನ್ನ ಬಗ್ಗೆ ಮಾತನಾಡಿದರೆ ನೀನು ಏನು ಆಗಲ್ಲ ಎಂದು ಕಿಡಿ ಕಾರಿದ್ದಾರೆ.