ಕರ್ನಾಟಕ

ಎಣ್ಣೆ ಪಾರ್ಟಿಯಲ್ಲಿ ಗುಂಡಿನ ಮೊರೆತ: ಯುವಕನ ಕೈಗೆ ಗಂಭೀರ ಗಾಯ

ಶ್ರೀಕಾಂತ್ ಪೂಜಾರಿ ಎಂಬ ಯುವಕನ ಮೇಲೆ ಗುಂಡು ಹಾರಿಸಿದ್ದಾರೆ. ಕಾರಣ ಇದರಿಂದ ಶ್ರೀಕಾಂತ್ ಪೂಜಾರಿ ಎಡಕೈಗೆ ಗಂಭೀರ ಗಾಯಗಳಾಗಿದೆ. ಘಟನೆ ಸಂಬಂಧ ಕಾಂತಪ್ಪ, ಮಾಳಪ್ಪ ಎಂಬುವವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿಯಲ್ಲಿಂದು ಗುಂಡಿನ ಸದ್ದು ಕೇಳಿಬಂದಿದ್ದು,  ಎಣ್ಣೆ ಪಾರ್ಟಿ ಮಾಡುವಾಗ ಶ್ರೀಕಾಂತ್ ಪೂಜಾರಿ ಎಂಬ ಯುವಕನ  ಮೇಲೆ ಗುಂಡು ಹಾರಿಸಿದ ಘಟನೆಯೊಂದು ನಡೆದಿದೆ. ಯುವಕನ ಕೈ ಗೆ ಗೊಂಡು ತಗುಲಿದ್ದು, ಗಂಭೀರ ಗಾಯಗಳಾಗಿದೆ.

Udupi: ಪ್ರಸಿದ್ಧ ಬಟ್ಟೆ ಮಳಿಗೆಯಲ್ಲಿ ಮಿಸ್‌ ಫೈರಿಂಗ್‌; ಓರ್ವ ಸಿಬ್ಬಂದಿಗೆ ಗಾಯ |  udayavani

ಈ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯಲ್ಲಿ ನಡೆದಿದ್ದು, ಶ್ರೀಕಾಂತ್ ಪೂಜಾರಿ ಎಂಬ ಯುವಕನ ಮೇಲೆ ಗುಂಡು ಹಾರಿಸಿದ್ದಾರೆ. ಕಾರಣ ಇದರಿಂದ ಶ್ರೀಕಾಂತ್ ಪೂಜಾರಿ ಎಡಕೈಗೆ ಗಂಭೀರ ಗಾಯಗಳಾಗಿದೆ. ಘಟನೆ ಸಂಬಂಧ ಕಾಂತಪ್ಪ, ಮಾಳಪ್ಪ ಎಂಬುವವರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಸದ್ಯ ಘಟನೆ ಸಂಬಂಧ ನರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.