ಹೈದರಾಬಾದ್ : ದನದ ಕೊಬ್ಬು ಬಳಕೆ ವಿವಾದ ಬೆನ್ನಲ್ಲೆ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಪತ್ತೆಯಾಗಿದೆ. ಈ ವಿಚಾರ ತಿಳಿದು ಭಕ್ತರಿಗೆ ಬಿಗ್ ಶಾಕ್ ಆಗಿದ್ದು, ಭಾವನೆಗಳ ಜತೆ ಟಿಟಿಡಿ ಆಟವಾಗುತ್ತಿದೆಯೇ ಎಂದು ಕಿಡಿಕಾರಿದ್ದಾರೆ. ಇದು ಭಕ್ತರ ಭಾವನೆಗೆ ಸಾಕಷ್ಟು ನೋವು ಉಂಟು ಮಾಡಿತ್ತು. ಇಂತಹ ಸಂದರ್ಭದಲ್ಲಿಯೇ ಕಳೆದ ವಾರ ಭಕ್ತರೊಬ್ಬರು ಪಡೆದ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೇಟ್ ಸಿಕ್ಕಿದೆ. ಈ ಬಗ್ಗೆ ಭಕ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯ ಗ್ರಾಮಾಂತರ ಮಂಡಲ ವ್ಯಾಪ್ತಿಯ ಗೊಲ್ಲಗುಡೆಂ ಪಂಚಾಯತ್ ಕಾರ್ತಿಕೇಯ ಟೌನ್ ಶಿಪ್ ನ ನಿವಾಸಿ ದೊಂತು ಪದ್ಮಾವತಿ ಎಂಬುವವರು ಸೆಪ್ಟೆಂಬರ್ 19 ರಂದು ತಿರುಮಲ ತಿರುಪತಿ ದೇವಸ್ಥಾನಕ್ಕೆ ತೆರಳಿ ನೀಡಿದ್ದರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಲಡ್ಡು ಪ್ರಸಾದವನ್ನು ತೆಗೆದುಕೊಂಡು ಮನೆಗೆ ಹಿಂದಿರುಗಿದ್ದರು. ಆ ಬಳಿಕ ಭಾನುವಾರ (ಸೆಪ್ಟೆಂಬರ್ 22) ಪ್ರಸಾದವನ್ನು ನೆರಹೊರೆಯವಿಗೆ ಹಾಗೂ ಸಂಬಂಧಿಕರಿಗೆ ಹಂಚಲು ತೆರೆದಿದ್ದಾಗ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕ್ ಇರುವುದು ಗೊತ್ತಾಗಿದೆ. ಅಚ್ಚರಿಗೊಂಡ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಬೇಸರ ವ್ಯಕ್ತಪಡಿಸಿದ್ದಾರೆ.
ಲಡ್ಡುವಿನಲ್ಲಿ ಪ್ಯಾಕ್ ಎಲ್ಲಿಂದ ಬಂತು ಎನ್ನುವ ಪ್ರಶ್ನೆ ಭಕ್ತರಲ್ಲಿ ಮೂಡಿದೆ. ಲಡ್ಡುಗಳನ್ನು ತಯಾರಿಸುವಾಗ ಯಾರಾದರೂ ಗುಟ್ಕಾ ಹಾಕಲು ತಂದಿದ್ದಾಗ ಬಿದ್ದಿರಬಹುದು ಅಥವಾ ಬಳಸುವ ಸಾಮಗ್ರಿಯಲ್ಲಿ ಒಂದಿಷ್ಟು ಕಲಬೆರಕೆಯಾಗಿರಬಹದು ಎಂಬ ಅನುಮಾನ ಮೂಡಿದೆ. 2012ರಲ್ಲೂ ತಿರುಪತಿ ಲಡ್ಡುವಿನಲ್ಲಿ ಗುಟ್ಕಾ ಪ್ಯಾಕೆಟ್ ಕಾಣಿಸಿಕೊಂಡಿತ್ತು.