ಸಿ.ಪಿ.ಯೋಗೇಶ್ವರ್ ಸೈನಿಕ ಕುಲಕ್ಕೆ ಅಪಮಾನ. ಅವರನ್ನು ಸೈನಿಕ ಅನ್ನಬಾರದು ಎಂದು, ಹೆಚ್.ವಿಶ್ವನಾಥ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ಯೋಗೇಶ್ವರ್ ಅನಿವಾರ್ಯನಾ ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಯೋಗೇಶ್ವರ್ ಒಬ್ಬ ಫ್ರಾಡ್. ನಾನು ಈ ಹಿಂದೆ ಹುಣಸೂರು ಚುನಾವಣೆಗೆ ನಿಂತಿದ್ದೆ. ಆಗ ಯಡಿಯೂರಪ್ಪ ಸಿಎಂ ಆಗಿದ್ರು. ಚುನಾವಣೆಗೆ ಬೇಕಾದ ಸಾಮಗ್ರಿ ಇವನ ಕೈನಲ್ಲಿ ಕೊಟ್ಟಿದ್ರು. ಆದ್ರೆ ಈತ ಹುಣಸೂರಿಗೆ ಬರಲೇ ಇಲ್ಲ. ಇಂತಹ ಫ್ರಾಡ್ ನ ಕಾಂಗ್ರೆಸ್ ಗೆ ಕರೆಸಿಕೊಂಡಿದ್ದೀರಾ ಎಂದು ಸಿಎಂ ಸಿದ್ದರಾಮಯ್ಯಗೆ ಪ್ರಶ್ನೆ ಮಾಡಿದ್ದಾರೆ.