ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್- 11ರ ವಿನ್ನರ್ ಆಗಿ ಕುರಿಗಾಹಿ ಹನುಮಂತು ಹೊರಹೊಮ್ಮಿದ್ರೆ, ನಟ ತ್ರಿವಿಕ್ರಂ ರನ್ನರ್ ಅಪ್ ಆಗಿ ಎರಡನೆ ಸ್ಥಾನಕ್ಕೆ ತೃಪ್ತಿಪಟ್ಟುಕಕೊಂಡಿದ್ದಾರೆ. ಇನ್ನೂ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಅಬ್ಬರಿಸಿದ್ದ ರಜತ್ 3ನೇಯವರಾಗಿ ಹೊರಹೊಮ್ಮಿದ್ದಾರೆ.
ಇತ್ತಾ, ಹಳ್ಳಿಹೈದ ಹನುಮಂತಣ್ಣ ಹನುಮಂತಣ್ಣ ಕಪ್ ಗೆದ್ದಿದ್ದಕ್ಕೆ ತ್ರಿವಿಕ್ರಂ ಖುಷಿ ವ್ಯಕ್ತ ಪಡಿಸಿದ್ದಾರೆ. ಹನುಮಂತ ವಿನ್ ಆದ ಬಗ್ಗೆ ನನಗೆ ಯಾವುದೇ ಬೇಸರ ಇಲ್ಲ. ‘ಹನುಮಂತ ಗೆದ್ದಿದ್ದು ತುಂಬಾನೇ ಖುಷಿ ಇದೆ. ಯುದ್ಧದದಲ್ಲಿ ನಿಂತಿದೀನಿ. ಆಟ ಎಲ್ಲಿಯೂ ಕೈ ಕೊಟ್ಟಿಲ್ಲ ತುಂಬಾ ಖುಷಿ ಆಗುತ್ತಿದೆ. ಮನೆಗೆ ಹೋದ ಮೊದಲ ದಿನದಿಂದಲೇ ಕೊನೆಯವರೆಗೂ ಇರುತ್ತೇನೆ ಎನ್ನುವ ಕಾನ್ಫಿಡೆನ್ಸ್ ಇತ್ತು. ರಜತ್ ಬಂದ ಮೇಲೆ ಸ್ಪರ್ಧೆ ಇನ್ನಷ್ಟು ಹೆಚ್ಚಿತ್ತು. ವೈರ್ಲ್ಡ್ಕಾರ್ಡ್ ಬಂದಿದ್ದರಿಂದ ಕಾನ್ಫಿಡೆನ್ಸ್ ಇತ್ತು. ಕೊನೆಯಲ್ಲಿ ಗೆಲುವು ಸೋಲು ಎನ್ನುವುದು ಮುಖ್ಯವಲ್ಲ. ನಾನು ಹೊರಗೆ ಬಂದ ಮೇಲೆ ಇಷ್ಟು ಜನರ ಪ್ರೀತಿ ಗೊತ್ತಾಯಿತು ಎಂದು ತ್ರಿವಿಕ್ರಂ ಸಂತಸ ವ್ಯಕ್ತಪಡಿಸಿದ್ದಾರೆ.