ಸ್ಪೆಷಲ್ ಸ್ಟೋರಿ

ಬೆಳಗಾವಿಯಲ್ಲಿ ಈದ್‌ ಮೆರಣಿಗೆಯಲ್ಲಿ ಹರ ಹರಮಹಾದೇವ, ಅಲ್ಲಾಹು ಅಕ್ಬರ್‌ ಘೋಷಣೆ!

ಈದ್‌ ಮಿಲಾದ್ ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ ಫೋಟೋ ಪ್ರದರ್ಶಿಸಿದರು. ಫೋಟ ನೋಡಿದ ವಕೀಲರು ಹರ ಹರ ಮಹಾದೇವ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಮೆರವಣಿಗೆಯಲ್ಲಿದ್ದ ಮುಸ್ಲಿಂ ಯುವಕರು ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದರು.

ಬೆಳಗಾವಿ:  ಈದ್‌ ಮಿಲಾದ್‌ ಮೆರವಣಿಗೆ ವೇಳೆ ಕೇಲವರು ಹರ ಹರ ಮಹಾದೇವ ಘೋಷಣೆ ಕೂಗಿದ್ದಾರೆ, ಇದನ್ನ  ಕೇಳುತ್ತಿದ್ದಂತೆಯೇ ಮುಸ್ಲಿಂ ಯುವಕರು ಅಲ್ಲಾಹು ಅಕ್ಟರ್‌ ಎಂದು ಪ್ರತಿಯಾಗಿ ಘೋಷಣೆ ಕೂಗಿದ್ದಾರೆ. ಇದರಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಎನಿದು ಘಟನೆ?
ಬೆಳಗಾವಿಯ ಚನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ವಕೀಲರು ಕಾಲೇಜು ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಈದ್‌ ಮಿಲಾದ್ ಮೇರವಣಿಗೆಯಲ್ಲಿ ಟಿಪ್ಪು ಸುಲ್ತಾನ ಫೋಟೋ ಪ್ರದರ್ಶಿಸಿದರು. ಫೋಟೊ ನೋಡಿದ ವಕೀಲರು ಹರ ಹರ ಮಹಾದೇವ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಮೆರವಣಿಗೆಯಲ್ಲಿದ್ದ ಮುಸ್ಲಿಂ ಯುವಕರು ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದರು. ಇದರಿಂದಾಗಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಪೊಲೀಸರು ಮುಸ್ಲಿಂ ಯುವಕರನ್ನು ಸಮಾಧಾನಗೊಳಿಸಿ ಅಲ್ಲಿಂದ ಮೆರ‍ವಣಿಗೆಯನ್ನು ಮುಂದೆ ಸಾಗಿಸಿದರು.