ವೈರಲ್

ಬಸ್ ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ : ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿದ್ಯಾರ್ಥಿಗಳ ಗುಂಪು

ಪಳ್ಳಂಗೋಡಿನ ಮೊಹಮ್ಮದ್ ನಿಯಾಜ್ ಅನುಚಿತವಾಗಿ ವರ್ತಿಸಿದ ಆರೋಪಿಯಾಗಿದ್ದು, ಸುಳ್ಯ ಕಾಲೇಜು ವಿದ್ಯಾರ್ಥಿನಿ ಬೆಂಗಳೂರಿನಿಂದ ಬರುತ್ತಿದ್ದ ಬಸ್ ಅನ್ನು ಬಿಸಿಲೆ ಘಾಟಿಯಲ್ಲಿ ಹತ್ತಿದ್ದಾಳೆ. ಆತ ಕುಳಿತಿದ್ದ ಪಕ್ಕದ ಸೀಟ್ ಖಾಲಿ ಇದ್ದ ಕಾರಣ ಅಲ್ಲೇ ಕುಳಿತುಕೊಂಡಿದ್ದು, ಸ್ವಲ್ಪ ದೂರ ಬಸ್ ಸಾಗಿದ ನಂತರ ನಿಯಾಜ್ ಅನುಚಿತವಾಗಿ ವರ್ತಿಸಿದ್ದಾನೆ.

ಸುಳ್ಯ : ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಂದಿಗೆ ಯುವಕನ್ನೊಬ್ಬ ಅನುಚಿತವಾಗಿ ವರ್ತಿಸಿದ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ನಡೆದಿದೆ. ಇದೇ ವೇಳೆ ವಿದ್ಯಾರ್ಥಿಗಳ ಗುಂಪು ಯುವಕನಿಗೆ ಹಿಗ್ಗಾಮುಗ್ಗಾವಾಗಿ ಥಳಿಸಿದೆ.

Indian brought to US from Afghanistan for trial - KalingaTV

ಪಳ್ಳಂಗೋಡಿನ ಮೊಹಮ್ಮದ್ ನಿಯಾಜ್ ಅನುಚಿತವಾಗಿ ವರ್ತಿಸಿದ ಆರೋಪಿಯಾಗಿದ್ದು, ಸುಳ್ಯ ಕಾಲೇಜು ವಿದ್ಯಾರ್ಥಿನಿ ಬೆಂಗಳೂರಿನಿಂದ ಬರುತ್ತಿದ್ದ ಬಸ್ ಅನ್ನು ಬಿಸಿಲೆ ಘಾಟಿಯಲ್ಲಿ ಹತ್ತಿದ್ದಾಳೆ. ಆತ ಕುಳಿತಿದ್ದ ಪಕ್ಕದ ಸೀಟ್ ಖಾಲಿ ಇದ್ದ ಕಾರಣ ಅಲ್ಲೇ ಕುಳಿತುಕೊಂಡಿದ್ದು, ಸ್ವಲ್ಪ ದೂರ ಬಸ್ ಸಾಗಿದ ನಂತರ ನಿಯಾಜ್ ಅನುಚಿತವಾಗಿ ವರ್ತಿಸಿದ್ದಾನೆ.

ವಿದ್ಯಾರ್ಥಿನಿ ಬಸ್ ನಿರ್ವಾಹಕನಿಗೆ ವಿಷಯ ತಿಳಿಸಿದ್ದು, ಸಹ ಪ್ರಯಾಣಿಕರು ಕೂಡ ನಿಯಾಜ್ ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯುವತಿ ಅದೇ ಬಸ್ ನಲ್ಲಿ ಸುಳ್ಯಕ್ಕೆ ಆಗಮಿಸಿದ್ದು, ನಿಯಾಜ್ ಸುಬ್ರಹ್ಮಣ್ಯದಲ್ಲಿ ಇಳಿದು ಮತ್ತೊಂದು ಬಸ್ ನಲ್ಲಿ ಸುಳ್ಯಕ್ಕೆ ಬಂದು ಪೈಚಾರಿನಲ್ಲಿ ಇಳಿದಿದ್ದಾನೆ. ವಿದ್ಯಾರ್ಥಿನಿ ತನ್ನ ಸಹಪಾಠಿಗಳಿಗೆ ವಿಷಯ ತಿಳಿಸಿದ್ದು, ವಿದ್ಯಾರ್ಥಿಗಳ ಗುಂಪು ಸುಳ್ಯದಲ್ಲಿ ಮೊಹಮ್ಮದ್ ನಿಯಾಜ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.