ಕ್ರೀಡೆಗಳು

10 ವರ್ಷದಿಂದ ಮಾತನಾಡದ ಹರ್ಭಜನ್‌, ಧೋನಿ… ಮುನಿಸಿಗೆ ಕಾರಣ ಏನು?

ಟೀಂ ಇಂಡಿಯಾದ ಮಾಜಿ ಆಟಗಾರರಾದ ಮಹೇಂದ್ರ ಸಿಂಗ್‌ ಧೋನಿ ಮತ್ತು ಹರ್ಭಜನ್‌ ಸಿಂಗ್‌ ಹತ್ತು ವರ್ಷದಿಂದ ಮಾತನಾಡಿಲ್ಲ. ಈ ಬಗ್ಗೆ ಸ್ವತಃ ಹರ್ಭಜನ್‌ ಸಿಂಗ್‌ ಮಾಹಿತಿ ಹಂಚಿಕೊಂಡಿದಾರೆ.

ಮುಂಬೈ: ಟೀಂ ಇಂಡಿಯಾದ ಮಾಜಿ ಆಟಗಾರರಾದ ಮಹೇಂದ್ರ ಸಿಂಗ್‌ ಧೋನಿ ಮತ್ತು ಹರ್ಭಜನ್‌ ಸಿಂಗ್‌ ಹತ್ತು ವರ್ಷದಿಂದ ಮಾತನಾಡಿಲ್ಲ. ಈ ಬಗ್ಗೆ ಸ್ವತಃ ಹರ್ಭಜನ್‌ ಸಿಂಗ್‌ ಮಾಹಿತಿ ಹಂಚಿಕೊಂಡಿದಾರೆ.

ಹರ್ಭಜನ್‌ ಸಿಂಗ್‌ ಸಂದರ್ಶನವೊಂದರಲ್ಲಿ ಧೋನಿ ಬಗ್ಗೆ ಕೇಳಿದ ಪ್ರಶ್ನೆಗೆ ನಾನು ಧೋನಿ ಜೊತೆ ಮಾತನಾಡುವುದಿಲ್ಲ. ಮಾತು ನಿಲ್ಲಿಸಿ ಸುಮಾರು 10 ವರ್ಷ ಕಳೆದಿದೆ. ನಾನು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡ್ತಿದ್ದ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಮಾತುಕತೆ ಆಗ್ತಿತ್ತು. ಧೋನಿ ಜೊತೆ ಮಾತು ನಿಲ್ಲಿಸಲು ನನ್ನ ಬಳಿ ಯಾವುದೇ ಕಾರಣವಿಲ್ಲ. ಧೋನಿ ಬಳಿ ಇದ್ರೂ ಇರಬಹುದು ಎಂದು ಹರ್ಭಜನ್ ಹೇಳಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾನು ಆಡುತ್ತಿದ್ದ ವೇಳೆಯಲ್ಲೂ ನಾವಿಬ್ಬರು ಮೈದಾನದಲ್ಲಿ ಮಾತ್ರ ಮಾತನಾಡ್ತಿದ್ದೆವು. ಮೈದಾನದಿಂದ ಹೊರಗೆ ಮಾತನಾಡುತ್ತಿರಲಿಲ್ಲ. ನಾನು ಅವರ ರೂಮ್ ಗೆ ಹೋಗುತ್ತಿರಲಿಲ್ಲ, ಅವರು ನನ್ನ ರೂಮ್‌ ಗೆ ಬರುತ್ತಿರಲಿಲ್ಲ. ನನಗೆ ಅವರ ಬಗ್ಗೆ ಯಾವುದೇ ವಿರೋಧವಿಲ್ಲ. ಅವರಿಗೂ ಇಲ್ಲದಿರಬಹುದು. ಒಂದು ವೇಳೆ ಇದ್ದರೆ ಅವರು ಹೇಳ್ಬಹುದಿತ್ತು. ನಾನು ಧೋನಿಗೆ ಎಂದೂ ಫೋನ್ ಮಾಡುವ ಪ್ರಯತ್ನ ನಡೆಸಿಲ್ಲ. ನನ್ನ ಫೋನ್ ರಿಸೀವ್ ಮಾಡುವವರಿಗೆ ಮಾತ್ರ ನಾನು ಫೋನ್ ಮಾಡ್ತೇನೆ ಎಂದು ಹರ್ಭಜನ್‌ ಸಿಂಗ್‌ ಹೇಳಿದಾರೆ.

ಹರ್ಭಜನ್ ಸಿಂಗ್ ಹಾಗೂ ಮಹೇಂದ್ರ ಸಿಂಗ್ ಧೋನಿ, 2007 ಟಿ -20 ವಿಶ್ವಕಪ್ (World Cup) ಹಾಗೂ 2011 ಏಕದಿನ ವಿಶ್ವಕಪ್ ನಲ್ಲಿ ಪ್ರಮುಖ ಪಾತ್ರವಹಿಸಿದ್ದರು.2015ರಲ್ಲಿ ಕೊನೆಯ ಬಾರಿ ಧೋನಿ ಹಾಗೂ ಹರ್ಭಜನ್, ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಪಂದ್ಯವನ್ನು ಆಡಿದ್ದರು. 2015 ಏಕದಿನ ಪಂದ್ಯದ ನಂತ್ರ ಹರ್ಭಜನ್ ಹಾಗೂ ಯುವರಾಜ್ ಸಿಂಗ್ ಅವರನ್ನು ಟೀಂ ಇಂಡಿಯಾದಿಂದ ಹೊರಗಿಡಲಾಗಿತ್ತು.