ಸರ್ಕಾರಿ ಶಾಲೆಯನ್ನು ಬೆಳೆಸುವ ನಿಟ್ಟಿನಲ್ಲಿ ದಿಢೀರನೆ ಹಾಸನದ ಆಲೂರು ತಾಲೂಕಿನ ಗಂಜಿಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಿಲ್ಲಾಧಿಕಾರಿ ಸತ್ಯಭಾಮ ಭೇಟಿ ನೀಡಿದ್ದಾರೆ. ಗಣಿತ ಬುಕ್ ಹಿಡಿದು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಉತ್ತರಿಸಲು ತಡವರಿಸಿದ ವಿದ್ಯಾರ್ಥಿಗಳಿಗೆ ತಾವೇ ಗಣಿತ ಪುಸ್ತಕವನ್ನು ಹಿಡಿದು ಮಕ್ಕಳಿಗೆ ಪಾಠ ಮಾಡಿದ್ದಾರೆ.