ಹಾಸನ : ವರ್ಷದ ಬಳಿಕ ಹಾಸನಾಂಬೆ ದರ್ಶನವನ್ನ ನೀಡಿದ್ದಾಳೆ. ಬಾಳೆಕಂಬವನ್ನ ಕಡಿದು ದೇಗುವ ಗರ್ಭಗುಡಿಯ ಬಾಗಿಲನ್ನ ತೆರೆಯಲಾಗಿದೆ. ಇಂದಿನಿಂದ 11 ದಿನಗಳ ಕಾಲ ಹಾಸನಾಂಬೆ ಉತ್ಸವ ನಡೆಯಲಿದ್ದು, 9 ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಜೊತೆಗೆ ದಿನದ 24 ಗಂಟೆಗಳು ದರ್ಶನಕ್ಕೆ ಅವಕಾಶವನ್ನ ಒದಗಿಸಲಾಗಿದೆ.
ಹತ್ತಕ್ಕೂ ಹೆಚ್ಚು ಅರ್ಚಕರು ಹಾಸನಾಂಬ ದೇವಿಯ ಪೂಜೆ ಸಲ್ಲಿಸಿ, 12 ಗಂಟೆಯಿಂದ 12 :5ಕ್ಕೆ ಹಾಸನಾಂಬೆ ದೇವಿಯ ಬಾಗಿಲು ತೆರೆಯಲಾಗಿದೆ. ಜಿಲ್ಲಾಡಳಿತದ ಸಮ್ಮುಖದಲ್ಲಿ ದೇಗುಲದ ಪ್ರಧಾನ ಅರ್ಚಕರು ಬಾಗಿಲನ್ನ ಓಪನ್ ಮಾಡಿದ್ದಾರೆ.