ಕರ್ನಾಟಕ

ಹಾಸನಾಂಬೆ ಪವಾಡ - ವರ್ಷಕ್ಕೊಮ್ಮೆ ಭಕ್ತರ ಕಷ್ಟ ನೀಗಿಸಲು ದೇಗುಲದ ಬಾಗಿಲು ಓಪನ್​

ಹಾಸನಾಂಬೆ ಅದ್ಬುತ ಪವಾಡ-ಕೇಳುವ ವರ ಕೊಡುವ ದೈವ

ಹಾಸನ - ವರ್ಷಕ್ಕೊಮ್ಮೆ ಬಾಗಿಲು ತೆರೆದು ಭಕ್ತರ ಕಷ್ಟಗಳ ಕರಗಿಸಿ ವರ ನೀಡುವ ದೇವಿಯೇ ಹಾಸನದ ಹಾಸನಾಂಬದೇವಿ. ಹಾಸನಾಂಬೆ ಅದ್ಬುತ ಪವಾಡಕ್ಕೆ ಸಾಕ್ಷಿ. ಗರ್ಭಗುಡಿಯಲ್ಲಿ ಹುತ್ತದಂತೆ ಆಕಾರವಿರುವ  ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರಿವುದಿಲ್ಲ.  ಮುಡಿಸಿದ ಹೂ ಬಾಡಿರಲ್ಲ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುತ್ತದೆ. ಇದು ಹಾಸನಾಂಬೆಯ ಪವಾಡಕ್ಕೆ ಹಿಡಿದ ವಿಸ್ಮಯ ದೃಶ್ಯವಾಗಿದೆ. 

ಪ್ರತಿ ವರ್ಷ ಆಶ್ವೀಜ ಮಾಸ ಪೌರ್ಣಮಿಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ದೇವಾಲಯ ತೆರೆಯುತ್ತದೆ. ಪೂರ್ವ ನಿಗದಿಯಂತೆ ಭಕ್ತರು ದರ್ಶನ ಮಾಡಲು ಅವಕಾಶ ಇರುತ್ತದೆ.ಕಡೆಗೆ ಬಲಿಪಾಡ್ಯಮಿಯ ಮಾರನೇ ದಿನ  ದೇವಿಗೆ ದೀಪ, ಅಕ್ಕಿ ನೈವಿದ್ಯಾ, ಅಲಂಕಾರಗಳು ಇರುವಂತೆಯೇ ಮುಚ್ಚಲಾಗುತ್ತದೆ.ಹಾಸನಾಂಬೆ ದೇವಿ ಮಡಿವಂತಿಕೆ- ನೈರ್ಮಲ್ಯ, ನೇಮ ನಿಷ್ಠೆಗೆ ಒಲಿವಳೆಂಬ ನಂಬಿಕೆ ಇದೆ.