ಹಾಸನ - ಪವಾಡ ದೇವಿ ಹಾಸನದ ಹಾಸನಾಂಬೆ ದರ್ಶನಕ್ಕೆ ವರ್ಷಕ್ಕೊಮ್ಮೆ ಮಾತ್ರ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಲ್ಲಿ ದಾಖಲೆಯ ಭಕ್ತಸಾಗರ ಹರಿದು ಬಂದಿತು. ಈ ಭಕ್ತಾದಿಗಳು ಈ ಬಾರಿ ದಾಖಲೆಯ ಕಾಣಿಕೆಯನ್ನ ಹುಂಡಿಯಲ್ಲಿ ಹಾಕಿದ್ದಾರೆ. ಸಾರ್ವಜನಿಕ ದರ್ಶನಕ್ಕೆ ತೆರೆ ಬಿದ್ದ ಮೇಲೆ ಹಾಸನಾಂಬೆ ಕಾಣಿಕೆ ಹುಂಡಿಯ ಏಣಿಕೆ ಕಾರ್ಯ ನಡೆದಿದು , ಈ ದಾಖಲೆಯ ಮೊತ್ತದ ಸಂಗ್ರಹದ ಮಾಹಿತಿ ಲಭ್ಯವಾಗಿದೆ.
ಅ.೨೪ ರಿಂದ ನ.೩ ರವರೆಗೂ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿತು. ಈ ವೇಳೆಯಲ್ಲಿ ೧೨ ಕೋಟಿ ೬೩ ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಅದುವೇ ೨೦.೪೦ ಭಕ್ತರು ದೇಗುಲದಲ್ಲಿ ದರ್ಶನ ಪಡೆದಿದರು. ೫೧ ಗ್ರಾಂ . ಚಿನ್ನ ಹಾಗೂ ೯೧೩ ಗ್ರಾಂ ಬೆಳ್ಳಿ ಹರಕೆಯನ್ನ ಭಕ್ತಾಧಿಗಳು ಹುಂಡಿಗೆ ಹಾಕಿದರು. ಇದೇ ವೇಳೆ ಬ್ಯಾನ್ ಆಗಿರುವ ೫೦೦,೧೦೦೦ ರೂ ನೋಟುಗಳು ಹಾಗೂ ವಿದೇಶಿ ಕರೆನ್ಸಿ ಸಹ ಹುಂಡಿಯಲ್ಲಿ ಸಿಕ್ಕಿದೆ.