ಕರ್ನಾಟಕ

ಹಾಸನ ನಗರಸಭೆ ಚುನಾವಣೆ.. ಹೈದರಾಬಾದ್​ ಗೆ ಟ್ರಿಪ್ ಹೋಗಿದ್ದ ಸದಸ್ಯರು ಹಾಸನಕ್ಕೆ ಹಾಜರ್

ಇಂದು ಹಾಸನದಲ್ಲಿ ನಗರಸಭೆ ಚುನಾವಣೆ ನಡೆಯಲಿದೆ. ಹೈದರಾಬಾದ್ ಗೆ ಹೋಗಿದ್ದ 21 ಜನ ಸದಸ್ಯರು ಇಂದು ಹಾಸನಕ್ಕೆ ಆಗಮಿಸಿದ್ದಾರೆ.

ಹಾಸನ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆ, ಹೈದರಾಬಾದ್ ಗೆ ಹೋಗಿದ್ದ 21 ಜನ ಸದಸ್ಯರು ಇಂದು ಹಾಸನಕ್ಕೆ ಆಗಮಿಸಿದ್ದಾರೆ. ಶಾಸಕ ಸ್ವರೂಪ್ ಪ್ರಕಾಶ್ ನೇತೃತ್ವದಲ್ಲಿ, ಜೆಡಿಎಸ್ನ 17 ಸದಸ್ಯರು, ಬಿಜೆಪಿಯ ಇಬ್ಬರು ಸದಸ್ಯರು ಹಾಗೂ ಇಬ್ಬರು ಪಕ್ಷೇತರ ಸದಸ್ಯರು ನಗರದ ಖಾಸಗಿ ಹೋಟೆಲ್ಗೆ ಆಗಮಿಸಿದರು. ಜೊತೆಗೆ ಹೆಚ್.ಡಿ.ರೇವಣ್ಣ ಕೂಡ ಹೋಟೆಲ್ ನಲ್ಲಿ ಸದಸ್ಯರೊಂದಿಗೆ ಗೌಪ್ಯ ಸಭೆ ಮಾಡಿದ್ದಾರೆ. 

ಒಟ್ಟು 35 ಸದಸ್ಯರಿರುವ ಹಾಸನ ನಗರಸಭೆಯ ಅಧ್ಯಕ್ಷ ಸ್ಥಾನ, ಬಹುತೇಕ ಜೆಡಿಎಸ್ ಪಕ್ಷಕ್ಕೆ ಒಲಿಯುವ ಸಾಧ್ಯತೆ ಇದೆ. ಗೆಲುವು ಸಾಧಿಸಿದ್ದ ಬಿಜೆಪಿಯ ಇಬ್ಬರೂ ಸದಸ್ಯರು ಜೆಡಿಎಸ್ ನತ್ತ ವಾಲಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದ ಬಿಜೆಪಿ, ಹಾಸನ ನಗರಸಭೆ ಚುನಾವಣೆಯಲ್ಲಿ ಭಾರಿ ಮುಖಭಂಗವಾಗುವ ಸಾಧ್ಯತೆ ಇದೆ.