ಕರ್ನಾಟಕ

ಹಾಸನ ನಗರಸಭೆಯಲ್ಲಿ ಗರಿಗೆದರಿದ ರಾಜಕೀಯ; ಅಧಿಕಾರದ ಚುಕ್ಕಾಣಿ ಹಿಡಿಯಲು ದೋಸ್ತಿ ಕಸರತ್ತು

ಮೊದಲಿನಿಂದಲೂ ಜೆಡಿಎಸ್ ಕಂಡು ಉರಿದು ಬೀಳುವ ಮಾಜಿ ಶಾಸಕ ಪ್ರೀತಂಗೌಡ ಬೆಂಬಲಿಗರು, ಜೆಡಿಎಸ್​ ಸಪೋರ್ಟ್ ನೀಡದಿರಲು ಚಿಂತನೆ ನಡೆಸಿದ್ದಾರೆ.

ಹಾಸನ ನಗರಸಭೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ನಗರಸಭೆಯ ಅಧ್ಯಕ್ಷ ಸ್ಥಾನವನ್ನ ಹಿಡಿಯಲು ಬಿಜೆಪಿ-ಜೆಡಿಎಸ್ ಕಸರತ್ತು ಆರಂಭಿಸಿವೆ. ಈ ಮಧ್ಯೆ ಹಾಸನದಲ್ಲಿ ದೋಸ್ತಿ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

ಮೊದಲಿನಿಂದಲೂ ಜೆಡಿಎಸ್ ಕಂಡು ಉರಿದು ಬೀಳುವ ಮಾಜಿ ಶಾಸಕ ಪ್ರೀತಂಗೌಡ ಬೆಂಬಲಿಗರು, ಜೆಡಿಎಸ್ಗೆ ಸಪೋರ್ಟ್ ನೀಡದಿರಲು ಚಿಂತನೆ ನಡೆಸಿದ್ದಾರೆ.

ಇತ್ತ ಹಾಸನ ನಗರಸಭೆ ಅಧ್ಯಕ್ಷ ಸ್ಥಾನವನ್ನು ಹಿಡಿಯಲು ಬಿಜೆಪಿ ನಾಯಕರು  ಮೈಂಡ್ ಗೇಮ್ ಶುರುಮಾಡಿದ್ದಾರೆ.  ಒಟ್ಟು 35 ಸಂಖ್ಯಾ ಬಲವುಳ್ಳ ನಗರಸಭೆಯಲ್ಲಿ ಪ್ರಭುತ್ವ ಸಾಧಿಸಲು ಪ್ಲಾನ್ ಮಾಡಿಕೊಂಡಿರುವ ಬಿಜೆಪಿ ಆ್ಯಂಡ್ ಟೀಂ ಜೆಡಿಎಸ್ ಸದಸ್ಯರ ಜೊತೆ ಮಾತುಕತೆ ನಡೆಸಿದೆ. 

ಹಾಸನದಲ್ಲಿ ಶಾಸಕ ಸ್ವರೂಪ್ ಹಾಗೂ ಮಾಜಿ ಶಾಸಕ ಪ್ರೀತಂ ಗೌಡ ಅಧಿಕಾರವನ್ನ ಹಿಡಿಯಲು ಕಸರತ್ತು ನಡೆಸ್ತಿದ್ದಾರೆ. ಹಾಗಾಗಿ ದೋಸ್ತಿಯ ಶುರುರುವಾಗಿರುವ ಕೆಲವೊಂದಿಷ್ಟು ಗೊಂದಲಗಳನ್ನ ಬಗೆಹರಿಸಲು ಇಂದು ಹಾಸನಕ್ಕೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್ ಬರುತ್ತಿದ್ದಾರೆ.