ಕರ್ನಾಟಕ

ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು ಹಾಸನ ಪೊಲೀಸರಿಂದ ಹೊಸ ಪ್ಲಾನ್..! ಏನದು ಗೊತ್ತಾ..?

ಇನ್ಮುಂದೆ ಕಾಫಿ ತೋಟ ಹಾಗೂ ಕೂಲಿ ಕೆಲಸಕ್ಕೆ ಬರುವವರು, ಮಾಲೀಕರ ಕೈಗೆ ಆಧಾರ್ ಕಾರ್ಡ್​ ಫೋಟೋ ಹಾಗೂ ವೋಟರ್ ಐಡಿ ಕೊಡಲೇಬೇಕು ಎಂಬ ನಿಯಮ ಹೊರಡಿಸಲಾಗಿದೆ.

ಹಾಸನ ಜಿಲ್ಲೆಯಲ್ಲಿ ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆ ಹಚ್ಚಲು ಪೊಲೀಸರಿಂದ ಹೊಸ ಪ್ಲಾನ್ ನಡೆಯುತ್ತಿದೆ. ಅದೇನಂದ್ರೆ ಇನ್ಮುಂದೆ ಕಾಫಿ ತೋಟ ಹಾಗೂ ಕೂಲಿ ಕೆಲಸಕ್ಕೆ ಬರುವವರು, ಮಾಲೀಕರ ಕೈಗೆ ಆಧಾರ್ ಕಾರ್ಡ್ ಫೋಟೋ ಹಾಗೂ ವೋಟರ್ ಐಡಿ ಕೊಡಲೇಬೇಕು ಎಂಬ ನಿಯಮ ಹೊರಡಿಸಿದೆ. ಇದರಿಂದ ಹೊರ ರಾಜ್ಯಗಳಿಂದ ಕೆಲಸಕ್ಕೆ ಬರುವವರಿಗೆ ಎದೆನಡುಕ ಶುರುವಾದಂತಿದೆ. 

 

 

ಅಷ್ಟೇ ಅಲ್ಲ ಬಾಡಿಗೆ ಕೊಡುವಾಗ ಪೋಸ್ಟ್ ಕಾರ್ಡ್ ಫೋಟೋ ಹಾಗೂ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಇನ್ನುಮುಂದೆ ಯಾರು ಬೇಕಾದ್ರೂ ಕಾಫಿ ತೋಟಕ್ಕೆ ಹೋಗುವಂತಿಲ್ಲ. ಮನೆ ಬಾಡಿಗೆ ಕೊಡುವುದಕ್ಕೂ ಮೊದಲು ಆಧಾರ್ ಕಾರ್ಡ್ ಕಡ್ಡಾಯ ಎನ್ನಲಾಗಿದೆ. ಪಿಎಸ್ ಶೋಭಾ ಬರಮನ್ನನವರ್ ಅರೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಈ ಬಗ್ಗೆ ಇಂದು  ಅರೆಹಳ್ಳಿ ಕಾಫಿ ಎಸ್ಟೇಟ್ ಮಾಲೀಕರ ಜೊತೆ ಸಭೆ ಕರೆದಿದ್ದು, ಇನ್ ಸ್ಪೆಕ್ಟರ್ ಕೆಲಸಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಭೆಗೆ ಹಾಜರಾಗದಿದ್ದಲ್ಲಿ, ಏನೇ ಸಮಸ್ಯೆ ಆದರೂ ಅದಕ್ಕೆ ಮಾಲೀಕರೇ ಹೊಣೆ ಎನ್ನಲಾಗಿದೆ.